ರಾಾಮ್ ಪ್ರೆಂಡ್ಸ್( ರಿ) ಕಟೀಲು ಇದರ ಐದನೇ ವರ್ಷದ ವಾರ್ಷಿಕೋತ್ಸವ,ಸಹಾಯ ಹಸ್ತ ವಿತರಣೆ
Monday, August 12, 2024
ಬಜಪೆ:ಸಮಾಜದಲ್ಲಿ ಯುವಕರು ಮುಂದೆ ಬಂದರೆ ಏನು ಬೇಕಾದರೂ ಸಾಧಿಸಬಹುದು ಎಂದು ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಕಟೀಲು ಸಾನಿದ್ಯ ಸಭಾಭವನದಲ್ಲಿ ರಾಮ್ ಪ್ರೆಂಡ್ಸ್( ರಿ) ಕಟೀಲು ಇದರ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಹಾಯ ಹಸ್ತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಾಚನಗೈದರು. ಈ ಸಂದರ್ಭ ಸಮಾಜನ ಅಶಕ್ತರಿಗೆ ಸಹಾಯ ಹಸ್ತ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಶಿವರಾಮ್ ಕೋಟ್ಯಾನ್ ಪೆರ್ಮುದೆ, ಲೋಕಯ್ಯ ಸಾಲಿಯಾನ್ ಕೊಂಡೆಲಾ, ಹರಿಪ್ರಸಾದ್ ಎಕ್ಕಾರ್, ಶ್ರೀರಾಮ್ ಭಟ್ ಪೊಳಲಿ, ಉದಯಪೂಜಾರಿ ಬಲ್ಲಾಲ್ ಬಾಗ್, ರಂಜಿತ್ ಪೂಜಾರಿ ತೋಡಾರು, ಅಭಿಲಾಷ್ ಶೆಟ್ಟಿ ಕಟೀಲ್, ರಾಜೇಶ್ ಅಮೀನ್ ಪೊರ್ಕೋಡಿ, ಸ್ಥಾಪಕಾಧ್ಯಕ್ಷ ರಮಾನಂದ ಪೂಜಾರಿ ಕಟೀಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಸುವಂತ್ ಸುವರ್ಣ ಸ್ವಾಗತಿಸಿ ವಿ.ಜೆ.ವಿಕ್ಯಾತ್ ನಿರೂಪಿಸಿದರು.