ಕಿನ್ನಿಗೋಳಿ ಯುಗಪುರುಷ ವಲಯದಲ್ಲಿ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
Friday, August 9, 2024
ಕಿನ್ನಿಗೋಳಿ : ಇಲ್ಲಿಯ ಯುಗಪುರುಷ
ವಲಯದ ಶ್ರೀ ಮದ್ಗುರು ರಾಘವೇಂದ್ರ
ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ
ಸ್ವಾಮಿಗಳ ಆರಾಧನಾ ಮಹೋತ್ಸವವು
ಇದೇ ಆಗಸ್ಟ್ ತಿಂಗಳ 20, 21, 22ರಂದು
ಜರಗಲಿದೆ. ಪ್ರತಿದಿನ ಪ್ರಾತಃ, ಮಧ್ಯಾಹ್ನ,
ಸಾಯಂ. ತ್ರಿಕಾಲ ಪೂಜೆ, ರಥೋತ್ಸವ,
ಪಲ್ಲಕಿ ಸೇವೆ ಹಾಗೂ ಮಧ್ಯಾಹ್ನ
ಅನ್ನಸಂತರ್ಪಣೆ ಹಾಗೂ ಪ್ರತಿ ದಿನ ವಿವಿಧ
ಭಜನಾ ತಂಡಗಳಿಂದ ಭಜನಾ
ಕಾರ್ಯಕ್ರಮ ಜರಗಲಿದೆ. ಆಗಸ್ಟ್ 22ರಂದು
ಸಾಯಂ.ಗಂಟೆ 5ರಿಂದ ನಲ್ವತ್ತೊಂದನೇ
ವರ್ಷದ ಸಾರ್ವಜನಿಕ ಸಾಮೂಹಿಕ
ಅಷ್ಟೋತ್ತರ ಶತ ಶ್ರೀ ಸತ್ಯನಾರಾಯಣ
ಪೂಜಾ ಮಹೋತ್ಸವವು ಜರಗಲಿದೆಯೆಂದು
ಯುಗಪುರುಷದ ಕೊಡೆತ್ತೂರು
ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.