ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆಯ ಪ್ರಯುಕ್ತ ಭಜನಾ ಜ್ಯೋತಿಯ ಉದ್ಘಾಟನೆ
Monday, August 19, 2024
ಮೂಲ್ಕಿ:ಬಿಲ್ಲವ ಸಮಾಜದ ಸಮಾನ ಮನಸ್ಕರ ಸಂಘಟನೆಯ ಬಲದಲ್ಲಿ 1934ರಂದು ಸ್ಥಾಪಿತಗೊಂಡ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘ ಇದರ ಕಟ್ಟಡ ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆಯ ಶುಭದಿನ ಪ್ರಯುಕ್ತ ಆಗಸ್ಟ್ 19ರಂದು ಬೆಳಿಗ್ಗೆ 6;45ಕ್ಕೆ ಶ್ರೀ ಕ್ಷೇತ್ರ ಬಪ್ಪನಾಡು ಇದರ ಕಾರ್ಯನಿರ್ವಹಣಾಧಿಕಾರಿಯಾಗಿರುವ ಶ್ವೇತ ಪಳ್ಳಿ ಅವರು ಭಜನಾ ಜ್ಯೋತಿಯನ್ನು ಉದ್ಘಾಟಿಸಿದರು. ಮಂದಿರದ ಪ್ರಧಾನ ಅರ್ಚಕ ಕೃಷ್ಣ ಶಾಂತಿ ಧಾರ್ಮಿಕ ವಿಧಿ ವಿಧಾನ ನಡೆಸಿದರು. ಈ ಸಂದರ್ಭದಲ್ಲಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಉಪಾಧ್ಯಕ್ಷರಾದ ನರೇಂದ್ರ ಕೆರೆಕಾಡು, ಸರೋಜಿನಿ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕುಬೆವೂರು, ಕೋಶಾಧಿಕಾರಿ ಕಮಲಾಕ್ಷ ಬಡಗುಹಿತ್ಲು, ಶ್ರೀ ನಾರಾಯಣಗುರು ಸೇವಾದಳದ ದಳಪತಿ ಶಂಕರ್ ಪಡುಬೈಲ್, ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಶಶಿಕಲಾ ಯದೀಶ್ ಅಮೀನ್, ಮಾಜಿ ಅಧ್ಯಕ್ಷರಾದ ರಾಘು ಸುವರ್ಣ, ಹರಿಶ್ಚಂದ್ರ ಪಿ. ಸಾಲ್ಯಾನ್, ಯದೀಶ್ ಅಮೀನ್, ರಮೇಶ್ ಅಮೀನ್, ಬಿರುವೆರ್ ಕುಡ್ಲದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಕಾರ್ಯದರ್ಶಿ ಗಿರಿಧರ್ ಅಮೀನ್, ಯುವವಾಹಿನಿ ಘಟಕದ ಅಧ್ಯಕ್ಷ ರಿತೇಶ್, ಕಾರ್ಯದರ್ಶಿ ಲತೀಶ್ ಕಾರ್ನಾಡ್ ಮತ್ತಿತರರು ಇದ್ದರು. ವಿವಿಧ ಭಜನಾ ತಂಡಗಳು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಭಜನಾ ಮಂಗಲೋತ್ಸವ ನಡೆಯಲಿದೆ.