ಕೊಡೆತ್ತೂರು ದೇವಸ್ಯ ಮಠದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆ
Monday, August 19, 2024
ಕಿನ್ನಿಗೋಳಿ: ವಿಶ್ವರೂಪವನ್ನೇ ತೋರಿಸಿದ ದೇವನಾಗಿ ತೋರಿದವನು ಕೃಷ್ಣ ಪರಮಾತ್ಮ. ಅಂತಹ ಭಗವಂತನನ್ನು ನಮ್ಮ ಮಕ್ಕಳ ರೂಪದಲ್ಲಿ ಕಾಣುವ ಪ್ರಯತ್ನ ಮುದ್ದುಕೃಷ್ಣ ವೇಷದ ಮೂಲಕ ಆಗುತ್ತಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯಪ್ರಸಾದ್ ಕೋರಿಯಾರ್ ಹೇಳಿದರು.
ಅವರು ಕೊಡೆತ್ತೂರು ದೇವಸ್ಯ ಮಠದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ
ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀನಿವಾಸ ಮಕ್ಕಳ ಕುಣಿತ ಭಜನಾ ತಂಡದ ಅಧ್ಯಕ್ಷ ಕಿಶೋರ್ ಶೆಟ್ಟಿ ಕೊಡೆತ್ತೂರು ಹಾಗೂ ಪತ್ರಕರ್ತ ಮಿಥುನ್ ಇವರನ್ನು ಗೌರವಿಸಲಾಯಿತು.
ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಪದ್ಮನಾಭ ಭಟ್ ಎಕ್ಕಾರು, ದೇವಸ್ಯ ಮತ್ತು ಕೊಡೆತ್ತೂರು ಗುತ್ತು ಇಲ್ಲಿನ ಪ್ರಸನ್ನ ಶೆಟ್ಟಿ, ವಾಮನ ಶೆಟ್ಟಿ ಸೂರಿಂಜೆ, ಇನರ್ ವೀಲ್ ಅಧ್ಯಕ್ಷೆ ಸವಿತಾ ಸಂತೋಷ್, ರಾಮದಾಸ ಉಡುಪ ದೇವಸ್ಯ ಮಠ
ಸುಧಾ ಉಡುಪ, ಕಾರ್ತಿಕೇಯ ಉಡುಪ ಮತ್ತಿತರು ಉಪಸ್ಥಿತರಿದ್ದು. ವೇದವ್ಯಾಸ ಉಡುಪ ಸ್ವಾಗತಿಸಿ ನವೀನ್ ಉಡುಪ ವಂದಿಸಿದರು. ಸುರೇಶ್ ಉಡುಪ ನಿರೂಪಿದರು. 120 ಕ್ಕೂ ಹೆಚ್ಚು ಮಕ್ಕಳು ಕೃಷ್ಣ ವೇಷ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದರು.