ಅತ್ತೂರು ಶಂಭು ಮುಕಾಲ್ದಿ ನಿಧನ
Wednesday, August 28, 2024
ಕಿನ್ನಿಗೋಳಿ: ಅತ್ತೂರು ಶ್ರೀ ಅರಸು ಕುಂಜಿರಾಯರ ಮುಕ್ಕಾಲ್ದಿ, ಗಡಿ ಪ್ರಧಾನರೂ, ದೈವರಾಧನೆ ಕ್ಷೇತ್ರದ ಜ್ಞಾನ ಭಂಡಾರದ ಕೊಂಡಿ ,ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿಯವರು(74) ಬುಧವಾರ ನಿಧನರಾದರು. ಅತ್ತೂರು ಅರಸು ಕುಂಜಿರಾಯ ದೈವಸ್ಥಾನ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನ, ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನ ಸೇರಿದಂತೆ ಮತ್ತಿತರ ದೇವಸ್ಥಾನ ದೈವಸ್ಥಾನಗಳ ಬ್ರಹ್ಮಕಲಶೋತ್ಸವಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಮತ್ತು ನಾಟಕ ಕಲಾವಿದರಾಗಿಯೂ ಗುರುತಿಕೊಂಡಿದ್ದರು.ಮೃತರು ಇಬ್ಬರು ಪುತ್ರರು, ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಾಳೆ ಬೆಳಿಗ್ಗೆ 10.30ಕ್ಕೆ ಸ್ವಗೃಹ ಅತ್ತೂರು ಭಂಡಾರಮನೆಯಲ್ಲಿ ನಡೆಯಲಿದೆ.
ಮೃತರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಾಳೆ ಬೆಳಿಗ್ಗೆ 10.30ಕ್ಕೆ ಸ್ವಗೃಹ ಅತ್ತೂರು ಭಂಡಾರಮನೆಯಲ್ಲಿ ನಡೆಯಲಿದೆ.