ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾದರೆ ಗ್ರಾಮದ ಅಭಿವೃದ್ಧಿಯಾದಂತೆ - ಎಂ. ಎಚ್. ಅರವಿಂದ ಪೂಂಜಾ
Thursday, August 29, 2024
ಮುಲ್ಕಿ: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾದರೆ ಗ್ರಾಮದ ಅಭಿವೃದ್ಧಿಯಾದಂತೆ ಎಂದು ಕಾರ್ನಾಡ್ ಧರ್ಮಸ್ತಾನದ ಆಡಳಿತ ಮೊಕ್ತೇಸರ ಎಂ. ಎಚ್. ಅರವಿಂದ ಪೂಂಜಾ ಹೇಳಿದರು.
ಅವರು ಕಾರ್ನಾಡ್ ಶ್ರೀ ಕ್ಷೇತ್ರ ಧರ್ಮಸ್ತಾನಕ್ಕೆ ನೂತನ ಧ್ವಜಸ್ತಂಭ ನಿರ್ಮಾಣದ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಅರ್ಚಕರಾದ ಸದಾನಂದ ಪೂಜಾರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಡಳಿತ ಸಮಿತಿಯ ಉಪಾಧ್ಯಕ್ಷ ಶಶೀಂದ್ರ ಸಾಲ್ಯಾನ್, ಸದಸ್ಯರಾದ ಜಯ ಸುವರ್ಣ ಪ್ರವೀಣ್ ಬಂಗೇರ, ದಿವಾಕರ ಕೋಟ್ಯಾನ್, ಸೌರವ್ ಶೆಟ್ಟಿ, ಇಂಜಿನಿಯರ್ ವಿಷ್ಣುಮೂರ್ತಿ ಭಟ್, ವಿಶ್ವನಾಥ ಭಟ್, ಪ್ರವೀಣ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.