ಮುಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರದ ಬಿಡುಗಡೆ ಕಾರ್ಯಕ್ರಮ
Wednesday, August 28, 2024
ಮುಲ್ಕಿ: ಮುಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರದ ಬಿಡುಗಡೆ ಕಾರ್ಯಕ್ರಮವು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರದಂದು ನಡೆಯಿತು
ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿರವರು ಮುಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರದ ಬಿಡುಗಡೆ ಮಾಡಿದರು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮಾಜೀ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ,
ಹಿರಿಯರಾದ ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ, ಮುರಳಿಧರ ಭಂಡಾರಿ, ಗಂಗಾಧರ ಶೆಟ್ಟಿ, ಬರ್ಕೆ ತೋಟ, ಸಾಯಿನಾಥ ಶೆಟ್ಟಿ, ಮುಂಡ್ಕೂರು, ಸ್ವರಾಜ್ ಶೆಟ್ಟಿ ಕಿನ್ನಿಗೋಳಿ, ಚಿತ್ತರಂಜನ್ ಭಂಡಾರಿ, ಜೀವನ್ ಶೆಟ್ಟಿ ಕಾರ್ನಾಡ್, ಮುಲ್ಕಿ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಶೆಟ್ಟಿ,ಮಾಜೀ ಅಧ್ಯಕ್ಷೆ ಚಂದ್ರ ಕಲಾ ಶೆಟ್ಟಿ, ಮಮತಾ ಶೆಟ್ಟಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಬಬಿತಾ ಶೆಟ್ಟಿ ಕಿನ್ನಿಗೋಳಿ, ಪುಷ್ಪರಾಜ ಚೌಟ, ಮಾದವ ಶೆಟ್ಟಿ ಉತ್ರಂಜೆ, ರಂಗನಾಥ ಶೆಟ್ಟಿ ಉದಯಕುಮಾರ್ ಶೆಟ್ಟಿ ಆಧಿಧನ್, ಶ್ರೀಶ ಐಕಳ, ಕಿಶೋರ್ ಶೆಟ್ಟಿ ಬಪ್ಪನಾಡು, ಮಹೀಮ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್,ಶರತ್ ಶೆಟ್ಟಿ, ಸಂಕಲಕರಿಯ, ಚಂದ್ರಹಾಸ ಶೆಟ್ಟಿ,ದಾಮೋದರ್ ಶೆಟ್ಟಿ ಕೊಡೆತ್ತೂರು, ನಿಶಾಂತ್ ಶೆಟ್ಟಿ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.