
ಆ.17ಚಿಗುರು ನೀನಾದ ಎಂಬ ಪುಟ್ಟ ಮಕ್ಕಳ ಹಸುರು ಪಾಠ ಕಾರ್ಯಕ್ರಮ
Friday, August 16, 2024
ಹಳೆಯಂಗಡಿ:ಬ್ರಹ್ಮಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳು ಕಾಟಿಪಳ್ಳ ಇವರ ಸಂಯೋಜನೆಯಲ್ಲಿ ಹಳೆಯಂಗಡಿಯ ಪೂಜಾ ಟ್ಯೂಷನ್ ಕ್ಲಾಸ್ ,ಮತ್ತು ಜೂನಿಯರ್ ರೆಡ್ ಕ್ರಾಸ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ಇವರ ಸಹಯೋಗದಲ್ಲಿ ಪಾವಂಜೆ ನಂದಿನಿ ನದಿಯ ತಟದಲ್ಲಿ ನೀನಾದ ರಂಗಮಂದಿರದ ವಠಾರದ ರಾಮಪ್ಪ ಪೂಜಾರಿ ಭಾಗ್ಯಾರು ಗದ್ದೆಯ ಕಟ್ಟಪುಣಿ ಯಲ್ಲಿ ಚಿಗುರು ನೀನಾದ ಎಂಬ ಪುಟ್ಟ ಮಕ್ಕಳ ಹಸುರು ಪಾಠ ಕಾರ್ಯಕ್ರಮವು ನಾಳೆ (ಅ.17)ರಂದು ನಡೆಯಲಿದೆ. ಮೂರು ವರ್ಷದಿಂದ ಎಂಟು ವರ್ಷದ ಒಳಗಿನ ಪುಟಾಣಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮಣ್ಣಿನಿಂದ ಬರುವ ಆರೋಗ್ಯದ ಚಿನ್ನ ಅನ್ನದ ಆಳವನ್ನು ಪುಟಾಣಿಗಳಿಗೆ ತಿಳಿಸುವ ಚಿಕ್ಕ ಪ್ರಯತ್ನ ಇದಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ ದಯಕರ ಇವರು ವಹಿಸಲಿದ್ದು ಉದ್ಘಾಟನೆಯನ್ನು ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್ ಇವರು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಕಡಂಬೋಡಿ ಮಹಾಬಲ ಪೂಜಾರಿ ,ಕುಸುಮ ಮಹಾಬಲ ಪೂಜಾರಿ, ಮಧುಕರ ಅಮೀನ್, ಪೂಜಾ ಟ್ಯೂಷನ್ ಕ್ಲಾಸಿನ ಅಧ್ಯಕ್ಷ ಗೋಪಾಲ ಬೀ ಕೋಟ್ಯಾನ್, ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಹಿರಿಯ ವಲಯ ಪ್ರಬಂಧಕ ಲ.ಯಾದವ ದೇವಾಡಿಗ , ರಾಜಾರಾಮ ಸಾಲಿಯಾನ್, ಭೋಜ ಅಂಚನ್ ಮಧ್ಯ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾರಾಯಣಗುರು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹಾವೀರ ಜೈನ್ ಪಾಲ್ಗೊಳ್ಳಲಿದ್ದು ಪೂಜಾ ಟ್ಯೂಷನ್ ಕ್ಲಾಸಿನ ನಿರ್ದೇಶಕರಾದ ಶ್ರೀಮತಿ ವಿನಯ ಜಿ ಕೋಟ್ಯಾನ್ ಇವರು ಪುಟಾಣಿಗಳಿಗೆ ಹಸಿರು ಪಾಠದ ಮಾಹಿತಿಯನ್ನು ನೀಡಲಿದ್ದಾರೆ. ಜಯಕೃಷ್ಣ. ಬಿ ಕೋಟ್ಯಾನ್ ,ಲ.ಯಶೋಧರ ಸಾಲ್ಯಾನ್ ,ಶ್ರೀಮತಿ ಜಯಂತಿ ಸಂಕಮಾರ್ ಕಾರ್ಯಕ್ರಮದ ಸಂಯೋಜಕರಾಗಿದ್ದು, ಪಾವಂಜೆ ಯ ಅನುಭವಿ ಕೃಷಿಕ ರಮೇಶ್ ದೇವಾಡಿಗ ಇವರ ತಂಡದಿಂದ ಬೆಳೆಯ ಕಳೆಯನ್ನು ಕೀಳುವ ಪ್ರಾತ್ಯಕ್ಸಿಕೆ ನಡೆಯಲಿದೆ ಎಂದು ಕಾರ್ಯಕ್ರಮ ನಿರ್ದೇಶಕ, ಜಾನಪದ ವಿದ್ವಾಂಸರಾದ ಡಾ. ಗಣೇಶ ಮೀನ್ ಸಂಕಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.