ಕೆನರಾ ಬ್ಯಾಂಕ್ ನ ವಿದ್ಯಾ ಜ್ಯೋತಿ ಯೋಜನೆ,ಪರಿಶಿಷ್ಟ ಜಾತಿ ಮತ್ತೆ ಪರಿಶಿಷ್ಟ ಪಂಗಡದ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ
Friday, August 16, 2024
ಬಜಪೆ: ಕೆನರಾ ಬ್ಯಾಂಕ್ ನ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಶಾಲೆಯ ಪರಿಶಿಷ್ಟ ಜಾತಿ ಮತ್ತೆ ಪರಿಶಿಷ್ಟ ಪಂಗಡದ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ನೀಡುವ ವಿದ್ಯಾರ್ಥಿವೇತನವನ್ನು ಕೆನರಾ ಬ್ಯಾಂಕಿನ ಪ್ರಬಂಧಕರಾದ ಶ್ರೀಮತಿ ಸಹನಾ ಅವರು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ವಿತರಿಸಿದರು. ವಿದ್ಯಾರ್ಥಿಗಳಾದ ಪದ್ಮಾವತಿ, ರೇಷ್ಮಾ , ದಿಯಾ ವಿದ್ಯಾರ್ಥಿವೇತನವನ್ನು ಪಡೆದುಕೊಂಡವರು.
ಈ ಸಂದರ್ಭ ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ,ಉಪಾಧ್ಯಕ್ಷೆ ಶ್ರೀಮತಿ ಪದ್ಮಾಕ್ಷಿ,ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು,ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸುದೀಪ್ ಅಮೀನ್ ,ಡಿಸಿಸಿ ಕ್ಲಬ್ ನ ಗೌರವಾಧ್ಯಕ್ಷ ಪ್ರಕಾಶ್ ಕುಕ್ಯಾನ್ ,ಅಧ್ಯಕ್ಷ ಪ್ರಶಾಂತ್ ಆಚಾರ್ಯ,ಕಾಯ್ದಂಡ ಯುವಕ ಮಂಡಲದ ಅಧ್ಯಕ್ಷ ಯಶೋಧರ,ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ತೇಜಸ್ವಿನಿ,ಹಿಂದೂ ಯುವ ಸೇನೆಯ ಅಧ್ಯಕ್ಷ ನಿರಂಜನ ಕುಲಾಲ್,ಎಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷೆ ಸುರೇಖಾ ಶೆಟ್ಟಿ,ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್ , ನಿವೃತ್ತ ಉಪಪ್ರಾಂಶುಪಾಲ ಉಮೇಶ್ ರಾವ್ ಎಕ್ಕಾರು,ನವಜ್ಯೋತಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಗುರುರಾಜ್,ಪಂಚಾಯತ್ ಸದಸ್ಯರುಗಳಾದ ವಿಕ್ರಂ ಮಾಡ,ಅನಿಲ್ ,ಸುರೇಖಾ ಶೆಟ್ಟಿಹಾಗೂ ಹಿರಿಯರಾದ ದಿನೇಶ್ ರಾವ್ ಎಕ್ಕಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.