ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ - ಶ್ರೀಮತಿ ಯಶೋದ ಆರ್ ಸುವರ್ಣ
Monday, July 15, 2024
ತೋಕೂರು:ಯುವಕರು ಮತ್ತು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿಗೆ ಒತ್ತು ನೀಡಿ ಗದ್ದೆಯಲ್ಲಿ ನೇಜಿ ನೆಡುವ ಜಾಗೃತಿ ಸೇವಾ ಸಂಸ್ಥೆಗಳಿಂದ ಮುಂದುವರಿಯ ಬೇಕು ಮತ್ತು ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದು ತೋಕೂರು ಶ್ರೀಮತಿ ಯಶೋದ ಆರ್.ಸುವರ್ಣ ಹೇಳಿದರು.ತೋಕೂರಿನ ಶ್ರೀಮತಿ ಯಶೋದ ಆರ್. ಸುವರ್ಣ ಅವರ ಗದ್ದೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ಇವರ ಆಶ್ರಯದಲ್ಲಿ ಜರುಗಿದ ನಮ್ಮ ನಡೆ ಕೃಷಿ ಭೂಮಿ ಕಡೆ ಎನ್ನುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮವನ್ನು ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು,ಗ್ರಾಮ ಪಂಚಾಯತ್ ಪಡುಪಣಂಬೂರು ಮತ್ತು ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ ಇದರ ಮಾರ್ಗದರ್ಶನದಲ್ಲಿ ಜರುಗಿತು. ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಶ್ರೀ ದೀಪಕ್ ಸುವರ್ಣ ಇವರ ಮುದ್ದಾಳತ್ವದಲ್ಲಿ ಸಂಸ್ಥೆಯ ಪದಾಧಿಕಾರಿಗಳು,ಸದಸ್ಯರು ಮತ್ತು ಸದಸ್ಯೆಯರು ಗದ್ದೆಗೆ ಇಳಿದು ನಾಟಿ ಮಾಡಿದರು ಹಾಗೂ ಮಹಿಳಾ ಸದಸ್ಯೆ ಶ್ರೀಮತಿ ಚಿತ್ರಾಕ್ಷಿ ಇವರು ಪಾಡ್ದನ ಹಾಡು ಹಾಡಿದರು.ಈ ಸಂದರ್ಭದಲ್ಲಿ ಪಡು ಪಣಂಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಹೇಮನಾಥ ಅಮೀನ್, ಸದಸ್ಯರಾದ ಮೋಹನ್ ದಾಸ್ ,ಸಂತೋಷ್ ಕುಮಾರ್ , ಸದಸ್ಯೆ ಜ್ಯೋತಿ ಕುಲಾಲ್ , ಸಂಸ್ಥೆಯ ಗೌರವ ಮಾರ್ಗದರ್ಶಕರು ರಮೇಶ್ ಅಮೀನ್ ,ಗೌರವ ಅಧ್ಯಕ್ಷರು ಪ್ರಶಾಂತ್ ಕುಮಾರ್ ಬೇಕಲ್,ಅಧ್ಯಕ್ಷ ದೀಪಕ್ ಸುವರ್ಣ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುನಿಲ್ ಜಿ ದೇವಾಡಿಗ,ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ,ಆರೋಗ್ಯ ನಿಧಿ ಕಾರ್ಯದರ್ಶಿ ಜಗದೀಶ್ ಕೋಟ್ಯಾನ್,ಪರಿಸರ ಸಂರಕ್ಷಣಾ ಕಾರ್ಯದರ್ಶಿ ಚಂದ್ರಶೇಖರ ದೇವಾಡಿಗ,ಮಹಿಳಾ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ, ಸದಸ್ಯರಾದ ಗಣೇಶ್ ದೇವಾಡಿಗ, ಗಣೇಶ್ ದೇವಾಡಿಗ ಪಂಜ, ಗೌತಮ್ ಬೆಲ್ಚಡ, ಹಿಮಕರ ಕೋಟ್ಯಾನ್, ರಮೇಶ್ ಕರ್ಕೇರ, ಕುಮಾರ್,ಪ್ರಮೋದ್ ಆಚಾರ್ಯ,ಗಣೇಶ್ ಕುಮಾರ್ ಬೆಂಗಳೂರು, ಧರ್ಮಾನಂದ ಶೆಟ್ಟಿಗಾರ್,ಗಣೇಶ್ ಅಮೀನ್, ಶಿವ ದೇವಾಡಿಗ,ಕಿರಣ್, ಸುಧಾಕರ ಸದಸ್ಯೆಯರಾದ ಮೀನಾಕ್ಷಿ ಸುನಿಲ್, ಸರಿತಾ ರಮೇಶ್,ಗೀತಾ ತಾರಾನಾಥ್ ,ಪ್ರಮೀಳಾ ಕೇಶವ ಗೀತಾ ಸುರೇಶ್,ಚಿತ್ರ ರಮೇಶ್ ಅಮೀನ್,ರಮ್ಯಾ ಹಿಮಕರ, ಚಂದ್ರಿಕ ಸಂತೋಷ್, ಕಾವ್ಯ,ನಿಕಿತಾ,ಶಿವಾನಿ ಮಕ್ಕಳಾದ ಅನುಶ್ರೀ,ರಕ್ಷಾ ಶೆಟ್ಟಿಗಾರ್ ,ಶ್ರೇಯಸ್ ದೇವಾಡಿಗ, ನಿಶಾನ್ ಅಮೀನ್, ಮಿತಾಂಶ್,ಆಯುಷ್ ಇನ್ನಿತರರು ಭಾಗವಹಿಸಿದ್ದರು.