ನೀರುಡೆ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಬಿಡುಗಡೆ
Tuesday, July 30, 2024
ನೀರುಡೆ:ರಜತ ಮಹೋತ್ಸವದ ಸಂಭ್ರಮದಲ್ಲಿರುವ ನೀರುಡೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನೀರುಡೆ ಶ್ರೀ ಗಣೇಶೋತ್ಸವದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಹರಿಪ್ರಕಾಶ್ ನೆಲ್ಲಿ ತೀರ್ಥರವರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀ ವಿಘ್ನೇಶ್ವರ ದೇವರನ್ನು ಪ್ರಾರ್ಥಿಸಿ, ದೀಪ ಬೆಳಗುವುದರ ಮುಖೇನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಸಮಿತಿಯ ಗೌರವಾಧ್ಯಕ್ಷ ಬಿ. ವಿದ್ಯಾಧರ ಹೆಗ್ಡೆ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಮಿತಿಯ ಸಂಚಾರಕ ಲ.ಮುಕ್ತಾನಂದ ಶೆಟ್ಟಿ, ಶಾಮ ಶೆಟ್ಟಿ ಎಕ್ಕಾರು, ಲ. ದಯಾನಂದ ಉಮಲೊಟ್ಟು ಹಾಗೂ ನವೀಕೃತ ಕಟ್ಟೆ, ಲ.ರಾಯನ್ ರೋಷನ್ ಡಿಸೋಜ ಶಲೋಮ್, ಲ. ಅಶೋಕ್ ನಾಯ್ಕ್, ಶ್ರೀನಿವಾಸ ಟೈಲರ್, ಮಿಥುನ್ ಬಳ್ಳಾಲ್ ಬೈಲು, ಸುವಿತ್ ನೀರುಡೆ, ಶರತ್, ಲೋಕೇಶ್, ತಾರನಾಥ ಎಕ್ಕಾರು ಸೀತಾರಾಮ್ ರೈ ಉಪಸ್ಥಿತರಿದ್ದರು. ಲ.ಮುರಳಿ ದಾಸ್ ಕೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.