-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಪರಿಸರ ಸ್ವಚ್ಛತೆಯ ಜೊತೆಗೆ  ಮಲೇರಿಯಾ, ಡೆಂಗೆ ಸಹಿತ ಮಾರಕ ರೋಗಗಳ ನಿರ್ಮೂಲನೆಗೆ ಜನರ ಸಹಕಾರ ಅತ್ಯಗತ್ಯ - ಇಂದು.ಎಂ

ಪರಿಸರ ಸ್ವಚ್ಛತೆಯ ಜೊತೆಗೆ ಮಲೇರಿಯಾ, ಡೆಂಗೆ ಸಹಿತ ಮಾರಕ ರೋಗಗಳ ನಿರ್ಮೂಲನೆಗೆ ಜನರ ಸಹಕಾರ ಅತ್ಯಗತ್ಯ - ಇಂದು.ಎಂ

ಮುಲ್ಕಿ: ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ಮತ್ತು ಅಕ್ರಮ ಸಾಗಾಣಿಕೆ ತಡೆಗಟ್ಟುವಿಕೆ ದಿನಾಚರಣೆ ಹಾಗೂ ಮಲೇರಿಯಾ ಮತ್ತು ಡೆಂಗ್ಯೂ ಬಗ್ಗೆ ಮಾಹಿತಿ ಕಾರ್ಯಾಗಾರ 2024 ಹಾಗೂ ಕಾಲೇಜಿನ 2024-2 5ನೇ ಸಾಲಿನ ಎನ್.ಎಸ್.ಎಸ್.ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಕಾರ್ನಾಡ್ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಇಂದು  ಎಂ. ಉದ್ಘಾಟಿಸಿ ಮಾತನಾಡಿ ಪರಿಸರ ಸ್ವಚ್ಛವಾಗಿ ಇಡುವುದರ ಜೊತೆಗೆ ಮಲೇರಿಯಾ, ಡೆಂಗೆ ಸಹಿತ ಮಾರಕ ರೋಗಗಳ ನಿರ್ಮೂಲನೆಗೆ ಜನರ ಸಹಕಾರ ಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ವಹಿಸಿದ್ದರು 
ಮುಖ್ಯ ಅತಿಥಿಗಳಾಗಿ ಮುಲ್ಕಿ ನ. ಪಂ ಸದಸ್ಯ ಪುತ್ತು ಬಾವ, ಕಾಲೇಜು ಸುಧಾರಣಾ ಮಂಡಳಿಯ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ,ಮುಕ್ಕ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ಡಾ. ಮಿಥುನ್ ಕುಮಾರ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ. ರೇಖಾ ಬಿ ಎಸ್ ಮತ್ತಿತರರು ಉಪಸ್ಥಿತರಿದ್ದರು ಎಲಿಯಮ್ಮ ಸ್ವಾಗತಿಸಿದರು, ಉಪನ್ಯಾಸಕರಾದ ರಮಾನಂದ ಧನ್ಯವಾದ ಅರ್ಪಿಸಿದರು, ಲಿಡಿಯ ನಿರೂಪಿಸಿದರು
ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ ಆರ್ ಪ್ರದೀಪ್ ಕುಮಾರ್ ಮಲೇರಿಯ ಸಹಿತ ಮಾರಕ ರೋಗಗಳ ನಿರ್ಮೂಲನೆ ಹಾಗೂ ಸುರಕ್ಷತೆ ಬಗ್ಗೆಮಾಹಿತಿ ನೀಡಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ