-->


 ಭಾರೀ ಮಳೆಗಾಳಿಗೆ ಕುಸಿದ ಮನೆ - ಆರು ಮಂದಿಯ ಸ್ಥಳಾಂತರ

ಭಾರೀ ಮಳೆಗಾಳಿಗೆ ಕುಸಿದ ಮನೆ - ಆರು ಮಂದಿಯ ಸ್ಥಳಾಂತರ

ಮುಲ್ಕಿ: ಸತತವಾಗಿ  ಸುರಿದ ಬಾರಿ ಮಳೆ ಹಾಗೂ ಬೀರುಗಾಳಿಗೆ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯ 
ಕಾಶಿಂಬಿಬಂದಗಿ ಸಾಬ್  ಎಂಬವರ ಮನೆ ಕುಸಿತವಾಗಿದ್ದು ಮನೆಯಲ್ಲಿದ್ದ ಆರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮನೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಕೂಲಿ ಮಾಡುತ್ತಿರುವ ಬಡ ಕುಟುಂಬ ಕಂಗಾಲಾಗಿದೆ
ಸ್ಥಳಕ್ಕೆ ಮುಲ್ಕಿ ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ
ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಡುಪಣಂಬೂರು, ಹಳೆಯಂಗಡಿ, ಭಾರೀ ಮಳೆ ಆಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದ್ದು ನದೀತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article