ರಾಷ್ಟ್ರಮಟ್ಟದ ಖೋ ಖೋ ಪಂದ್ಯಾಟದಲ್ಲಿ ದ್ವಿತೀಯ,ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರಿಂದ ಅಭಿನಂದನಾ ಕಾರ್ಯಕ್ರಮ
Tuesday, July 30, 2024
ಬಜಪೆ:ಎಚ್‌ಸಿಎಲ್ ಸಂಸ್ಥೆಯ ಆಯೋಜನೆಯೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟವು ತಮಿಳುನಾಡಿನಲ್ಲಿ ನಡೆದಿದ್ದು, ಈ ಕ್ರೀಡಾಕೂಟದಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಖೋ ಖೋ ದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರೀಡಾಕೂಟದಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ಅ ಪ್ರಯುಕ್ತ ಕ್ರೀಡಾಭಿಮಾನಿಗಳು ಹಾಗೂ ಎಕ್ಕಾರು ಗ್ರಾಮಸ್ಥರಿಂದ ಅಭಿನಂದನಾ ಕಾರ್ಯಕ್ರಮವು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿತು.ಈ ವೇಳೆ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಿಂದ ಎಕ್ಕಾರು ಗ್ರಾ.ಪಂ ತನಕ ಹಾಗೂ ಶ್ರೀ ಕ್ಷೇತ್ರ ಕಟೀಲಿಗೆ ಅದ್ದೂರಿ ಮೆರವಣಿಗೆಯು ನಡೆಯಿತು. ಮೆರವಣೆಗೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಜೇತ ಕ್ರೀಡಾಪಟುಗಳು , ಗಣ್ಯಾತೀಗಣ್ಯರು ,ಎಕ್ಕಾರು ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಪಾಲ್ಗೊಂಡರು.
ಬಳಿಕ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.ಹಾಗೂ ತಂಡದ ತರಭೇತುದಾರರಾದ ಶಿಕ್ಷಕಿ ವಿದ್ಯಾಲತ ಅವರನ್ನು ಗೌರವಿಸಲಾಯಿತು.ಸನ್ಮಾನ ಸ್ವಿಕರಿಸಿದ ಶಿಕ್ಷಕಿ ವಿದ್ಯಾಲತ ಹಾಗೂ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಪಡೆದ ಅನುಭವ ಹಾಗೂ ಅಭಿನಂದನೆಯನ್ನು ಪಡೆದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ,ಕರಾಟೆ ಶಿಕ್ಷಕ ಈಶ್ವರ್ ಕಟೀಲ್ ,ಕಾಯ್ದಂಡ ಯುವಕ ಮಂಡಲದ ಗೌರವಾಧ್ಯಕ್ಷ ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು,ವಿಜಯ ಯುವ ಸಂಗಮದ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ,ಡಿ.ಸಿ.ಸಿ ಕ್ಲಬ್ ನ ಗೌರವಾಧ್ಯಕ್ಷ ಪ್ರಕಾಶ್ ಕುಕ್ಯಾನ್ ,ಮೇಲೆಕ್ಕಾರು ಯುವಕ ಮಂಡಲದ ಅಧ್ಯಕ್ಷ ರಿತೇಶ್ ಶೆಟ್ಟಿ,ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸುದೀಪ್ ಅಮೀನ್,ಎಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ,ಲಯನ್ಸ್ ಕ್ಲಬ್ ಎಕ್ಕಾರಿನ ಸ್ಟ್ತಾನೀ ಪಿಂಟೋ,ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಎನ್ ರಾವ್ ,ಶಾಲಾ ವಿದ್ಯಾರ್ಥಿ ನಾಯಕ ಮಾ.ಮನ್ವಿತ್ ಎಸ್.ಅಮೀನ್,ಎಸ್ ಡಿ ಎಂ ಸಿ ಸದಸ್ಯರುಗಳು,ಪೊಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸುರೇಶ್ ಶೆಟ್ಟಿ ಸ್ವಾಗತಿಸಿದರು.ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.