-->


ಐವನ್‌ ಡಿಸೋಜಾರಿಗೆ ಅಭಿನಂದನಾ ಕಾರ್ಯಕ್ರಮ

ಐವನ್‌ ಡಿಸೋಜಾರಿಗೆ ಅಭಿನಂದನಾ ಕಾರ್ಯಕ್ರಮ

ಕಿನ್ನಿಗೋಳಿ: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಮಂಗಳೂರು ಉತ್ತರ ವಲಯ, ಇದರ ಮುಂದಾಳತ್ವದಲ್ಲಿ, ಉತ್ತರ ವಲಯದ ಎಲ್ಲಾ ಕಥೊಲಿಕ್ ಸಭಾ ಘಟಕಗಳ ಸಹಯೋಗದಲ್ಲಿ, ವಿಧಾನ ಪರಿಷತ್ತಿನ ಸದಸ್ಯರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಐವನ್ ಡಿಸೋಜ ಅವರನ್ನು  ಕಿನ್ನಿಗೋಳಿ ಚರ್ಚ್ ಸಭಾ ಭವನದಲ್ಲಿ ಅಭಿನಂದಿಸುವ ಕಾರ್ಯಕ್ರಮವು  ನಡೆಯಿತು.
 ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ  ಅಧ್ಯಕ್ಷ  ಮೆಲ್ರೀಡ ಜೇನ್ ರೊಡ್ರಿಗಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದರು. 
ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕರಾಗಿರುವ  ವಂದನೀಯ ಗುರು ಓಸ್ವಾಲ್ಡ್ ಮೊಂತೆರೊ ಹಾಗೂ ಕಿನ್ನಿಗೋಳಿ ಚರ್ಚ್ ಧರ್ಮ ಗುರುಗಳಾದ ವಂದನೀಯ ಫಾ ಜೋಕಿಂ ಫೆರ್ನಾಂಡಿಸ್ ರವರು ಐವನ್‌ ಡಿಸೋಜರವರಿಗೆ ಶುಭ ಕೋರಿದರು. 
ಕಿನ್ನಿಗೋಳಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲಿಯಂ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯ ಕಾರ್ಯದರ್ಶಿ ಶ್ರೀಮತಿ ಶಾಂತಿ ಮೇಬಲ್ ಮಾರ್ಟಿಸ್, ಖಜಾಂಚಿ  ಜೇಮ್ಸ್ ಲೋಬೊ, ನಿಕಟ ಪೂರ್ವ ಅಧ್ಯಕ್ಷ  ಫ್ರಾನ್ಸಿಸ್ ಸೆರಾವೊ, ಕಿನ್ನಿಗೋಳಿ ಘಟಕ ಅಧ್ಯಕ್ಷ ಹಾಗೂ ವಲಯ ರಾಜಕೀಯ ಸಂಚಾಲಕಿ ಶ್ರೀಮತಿ ಗ್ರೆಟ್ಟಾ ಫೆರ್ನಾಂಡಿಸ್, ಕಿನ್ನಿಗೋಳಿ ಘಟಕ ಕಾರ್ಯದರ್ಶಿ ವಿಲಿಯಂ ಸಿಕ್ವೇರ, ಕಿನ್ನಿಗೋಳಿ ಘಟಕದ  ರಾಜಕೀಯ ಸಂಚಾಲಕ ಪ್ರಕಾಶ್ ಡಿಸೋಜ,ಸ್ಟ್ಯಾನಿಮಿರಾಂದ, ಉಪಸ್ಥಿತರಿದ್ದರು.
ಶ್ರೀಮತಿ ಗ್ರೆಟ್ಟಾ ಡಿಸೋಜಾರವರು ಧನ್ಯವಾದ ಸಮರ್ಪಿಸಿದರು. ಡಾ‌. ಫ್ರೀಡ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಹಲವರು ತಮ್ಮ ಬೇಡಿಕೆಗಳನ್ನು ಮನವಿ ರೂಪದಲ್ಲಿ  ಐವನ್ ಡಿಸೋಜಾರಿಗೆ ನೀಡಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article