ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡುವುದೇ ನಮ್ಮ ಧ್ಯೇಯವಾಗಲಿ -ಗೋಪಿನಾಥ ಪಡಂಗ
Monday, July 1, 2024
ಮುಲ್ಕಿ:ನಗರದಲ್ಲಿ ಆಧುನಿಕರಣಕ್ಕೆ ಹೆಚ್ಚು ಒತ್ತು ನೀಡಿ ಹಸುರೀಕರಣ ವಿನಾಶದತ್ತ ಸಾಗುತ್ತಿದ್ದು ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡುವುದೇ ನಮ್ಮ ಧ್ಯೇಯವಾಗಲಿ ಎಂದು ಮುಲ್ಕಿ ಕ್ಷೀರ ಸಾಗರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು.
ಅವರು ಸಹಕಾರಿ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಈ ಸಂದರ್ಭ ಸಹಕಾರಿ ಸಂಘದ ಉಪಾಧ್ಯಕ್ಷೆ ಲಿಡಿಯಾ ಫುಟಾಡೋ, ನಿರ್ದೇಶಕರಾದ ರಮೇಶ್ ಕೋಟ್ಯಾನ್, ಹರೀಂದ್ರ ಸುವರ್ಣ, ಶಶಿಕಲಾ, ಮೋಹನ ದಾಸ್, ವೀರಪ್ಪ ಎಲ್.ಅಮೀನ್, ಲಕ್ಷ್ಮಿ, ಸುಧಾಕರ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುರಾಜ್ ಉಪಸ್ಥಿತರಿದ್ದರು.