ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ
Monday, July 1, 2024
ಮುಲ್ಕಿ: ಸುರಭಿ ಎಲೆಕ್ಟ್ರಾನಿಕ್ಸ್ ಹಾಗೂ ಯುವ ಪಡೆ ಜಂಟಿಯಾಗಿ 2024- 25 ನೇ ಸಾಲಿನ ಮುಲ್ಕಿ ಆಸು ಪಾಸಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ವಿತರಣಾ ಸಮಾರಂಭ ಸುರಬಿ ಎಲೆಕ್ಟ್ರಾನಿಕ್ ನ ಮುಂಭಾಗದ ವೇದಿಕೆಯಲ್ಲಿ ನಡೆಯಿತು.
ಕಾರ್ನಾಡ್ ಕೊಸೆಸಾಂವ್ ಚರ್ಚ್ ನ ಧರ್ಮ ಗುರು ವಂ. ಫಾ.ಅಂತೋನಿ ಶೆರಾ ಆಶೀರ್ವಚನ ನೀಡಿ ವಿದ್ಯಾರ್ಥಿಗಳು ಸಹಾಯಹಸ್ತ ಪಡೆದು ಸಾಧಕರಾಗಿ ಮುಂದಿನ ದಿನಗಳಲ್ಲಿ ತಾವು ಕೂಡ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಲು ಪ್ರಯತ್ನಿಸಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಭಿ ಎಲೆಕ್ಟ್ರಾನಿಕ್ಸ್ ನ ಮಾಲಕ ಜೋನ್ ಕ್ವಾಡ್ರಾಸ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಸದಸ್ಯ ಬಾಲಚಂದ್ರ ಕಾಮತ್, ಹೆಜಮಾಡಿ ಗ್ರಾ.ಪಂ. ಮಾಜೀ ಅಧ್ಯಕ್ಷೆ ಲಿಡಿಯ ಫುಟಾಡೋ
ಹೊಸ ಅಂಗಣ ಮಾಸಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್,ಸಮಾಜಸೇವಕ ವಾಸು ಪೂಜಾರಿ ಚಿತ್ರಾಪು ,ಮುಲ್ಕಿ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಕುಂದರ್,ಯುವ ಪಡೆ ಅಧ್ಯಕ್ಷೆ ಸುಪ್ರೀತಾ ಪುನರೂರು ಮತ್ತಿತರರು ಉಪಸ್ಥಿತರಿದ್ದರು ರೋಶನ್ ಫುಟಾಡೋ ನಿರೂಪಿಸಿದರು.
ಬಳಿಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಸಲು ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ವೆಚ್ಚದ ಆರ್ಥಿಕ ನೆರವು ವಿತರಣಾ ಸಮಾರಂಭ ನಡೆಯಿತು ಹಾಗೂ ಆರ್ಯಭಟ ಪ್ರಶಸ್ತಿ ಪಡೆದ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್ ರವರನ್ನು ಗೌರವಿಸಲಾಯಿತು