ಸಂಸ್ಕಾರಯುತ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ಉದ್ದೇಶ:ವೇ.ಮೂ ಕೊಲಕಾಡಿ ವಾದಿರಾಜ ಉಪಾಧ್ಯಾಯ
Sunday, June 30, 2024
ಮೂಲ್ಕಿ:ಸಂಸ್ಕಾರಯುತ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ಉದ್ದೇಶ, ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಅನುಭವಶಾಲಿಗಳ್ನನಾಗಿಸಿ ಸಂಸ್ಕಾರಯುತ ನಾಗರೀಕರನ್ನಾಗಿ ಪರಿವರ್ತಿಸುತ್ತವೆ ಅಲ್ಲದೆ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಮೂಲಕ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಆಸ್ತಿ ಆಗಬೇಕು ಮಾನವೀಯ ಮೌಲ್ಯಗಳನ್ನು ಬಿತ್ತುವ ಮತ್ತು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಾಯಕರಾಗಿ ಮೂಡಿಬನ್ನಿ ಎಂದು ಧಾರ್ಮಿಕ ವಿದ್ವಾಂಸರು ಹಾಗೂ ಜ್ಯೋತಿಷಿಗಳಾದ ವೇ.ಮೂ ಕೊಲಕಾಡಿ ವಾದಿರಾಜ ಉಪಾಧ್ಯಾಯ ಅವರು ಹೇಳಿದರು.
ಅವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ಮುಖ್ಯ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ ಹಾಗೂ ವಿವಿಧ ಕ್ಲಬ್ ಗಳ 2024-25 ನೆ ಸಾಲಿನ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಮಾತನಾಡಿ ಜ್ಞಾನಾರ್ಜನೆಯ ಜೊತೆಗೆ ಕೌಶಾಲ್ಯಾಭಿವೃದ್ಧಿಯತ್ತ ಗಮನ ಹರಿಸಬೇಕು ಹಾಗೂ ವಿದ್ಯಾರ್ಥಿ ಜೀವನ ನಿಜವಾಗಲೂ ಬಂಗಾರದ ಜೀವನವಲ್ಲ ಆದರೆ ಇದು ಕಬ್ಬಿಣದ ಕಡಲೆಯ ಜೀವನ ಏಕೆಂದರೆ ಇಲ್ಲಿ ಯಾರು ಪರಿಶ್ರಮವಹಿಸಿ ತಪ್ಪಿಸ್ಸಿನ ರೂಪದಲ್ಲಿ ವಿದ್ಯಾರ್ಜನೆಗೈದು ಯಶಸ್ವಿಯಾಗುತ್ತಾರೋ ಅವರಿಗೆ ಮುಂದಿನ ಜೀವನ ಬಂಗಾರ ಮಯವಾಗಿಸಿಕೊಳ್ಳಲು ಸಾಧ್ಯವೆಂದರು.
ಶಾಲಾ ಚುನಾವಣೆಯ ಮೂಲಕ ಆಯ್ಕೆಯಾದ, ಶಾಲಾ ನಾಯಕಿ ಅನ್ವಿತಾ ಕುಲಾಲ್ ಉಪನಾಯಕ ಕೇಶವ್ ಭಟ್, ಇತರೆ ಸಂಘಗಳ ಹಾಗೂ ಕ್ಲಬ್ ನಾಯಕ, ನಾಯಕಿಯರು ಉಪಸ್ಥಿತರಿದ್ದರು
ಸಹ ಶಿಕ್ಷಕಿ ವನಿತಾ ಸ್ವಾಗತಿಸಿದರು, ನಿಶ್ಮಿತ ಪ್ರಮಾಣವಚನ ಬೋಧಿಸಿದರು, ಶರ್ಮಿಳ ಪ್ರಾಸ್ತಾವಿಕವಾಗಿ ಮಾತನಾಡಿದರು ಪುಷ್ಪಲತಾ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.