ಶಿಮಂತೂರು: ಅಗಸ್ಟ್ 17ರಂದು ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ; ಆಮಂತ್ರಣ ಪತ್ರಿಕೆ ಬಿಡುಗಡೆ
Monday, July 29, 2024
ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಆಗಸ್ಟ್ 17ನೇ ಶನಿವಾರ ಸಿಂಹ ಸಂಕ್ರಮಣದ ಶುಭ ದಿನದಂದು ಬೆಳಿಗ್ಗೆ 8:00 ಯಿಂದ ಶ್ರೀ ಆದಿ ಜನಾರ್ದನ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮಗಳಿಂದ ಸಾನಿಧ್ಯವೃದ್ದಿಯಾಗುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ , ಪಂಚಾಯತ್ ಉಪಾಧ್ಯಕ್ಷರು ಶಿಮಂತೂರುಯುವಕ ಮಂಡಲದಸದಸ್ಯರು, ಮಹಿಳಾ ಭಜನಾ ಮಂಡಳಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.