ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ
Tuesday, July 23, 2024
ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಲ್ ಬೈಲ್ ಕ್ಲಬ್ ನ 2024-2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು. ಒಂದನೇ ರಾಜ್ಯಪಾಲರು ಮತ್ತು ಪದಗ್ರಹಣ ಅಧಿಕಾರಿ ಕುಡ್ಲಿ ಅರವಿಂದ ಶೆಣೈ pmjf ಇವರು ನೂತನ ಅಧ್ಯಕ್ಷ ಸೂರಜ್ ಆಚಾರ್ಯ ಕದ್ರಿ, ಕಾರ್ಯದರ್ಶಿ ಕಿಶೋರ್ ಡಿ ಶೆಟ್ಟಿ, ಕೋಶಾಧಿಕಾರಿ ಸತ್ಯೇಂದ್ರ ಭಟ್ ಹಾಗೂ ಲಿಯೋ ನೂತನ ಅಧ್ಯಕ್ಷೆ ಜ್ಞಾಹ್ನವಿ, ಕಾರ್ಯದರ್ಶಿ ಸುಮಂತ್, ಕೋಶಾಧಿಕಾರಿ ಅಪೇಕ್ಷ ಕದ್ರಿ ಇವರುಗಳಿಗೆ ಪದಗ್ರಹಣ ಮಾಡಿದರು. ನೂತನ ಅಧ್ಯಕ್ಷ ಸೂರಜ್ ಆಚಾರ್ಯ, ಪತ್ನಿ ನಿಶಾ ಮತ್ತು ತಾಯಿ ಶಾಲಿನಿ ವಿ. ಆಚಾರ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸದಸ್ಯರಾಗಿ ಆಯ್ಕೆಯಾದ ಕ್ಲಬ್ಬಿನ ಸದಸ್ಯ ಮೋಹನ್ ಕೊಪ್ಪಲ್ ಕದ್ರಿ, zee ಕನ್ನಡದ ಡ್ರಾಮಾ ಜೂನಿಯರ್ ಸೀಸನ್ 5ರ ಚಾಂಪಿಯನ್ ರಿಷಿಕಾ ಕುಂದೇಶ್ವರ ಕದ್ರಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ 98.08 ಅಂಕ ಗಳಿಸಿ ಸೈಂಟ್ ಅಲೋಶಿಯಸ್ ಶಾಲೆಗೆ 3ನೇ ಟಾಪರ್ ಆದ ಅದಿತಿ ವಿ. ರಾವ್ ಕದ್ರಿ ಇವರುಗಳಿಗೆ ಅತಿಥಿಗಳು ಸನ್ಮಾನಿಸಿದರು. ನಿರ್ಗಮನ ಅಧ್ಯಕ್ಷ ಸನತ್ ಕದ್ರಿ, ಸಂಪುಟ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷೆ ವೇಣಿ ಮರೋಳಿ, ವಲಯ ಅಧ್ಯಕ್ಷ ಚರಣ್ ಆಳ್ವ, ಡಿಸ್ಟಿಕ್ ಲಿಯೋ ಅಧ್ಯಕ್ಷೆ ಸಮೀಕ್ಷಾ ಕದ್ರಿ, ಮಾಜಿ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ, ಕ್ಲಬ್ಬಿನ ಸ್ಥಾಪಕ ಸದಸ್ಯ ಕೆ.ಜೆ. ದೇವಾಡಿಗ, ಚಂದ್ರಹಾಸ ಶೆಟ್ಟಿ, ಪ್ರದೀಪ್ ಆಳ್ವ, ಗೋಕುಲ್ ಕದ್ರಿ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ವಿನೂತನ್ ಕಲಿವೀರ್ ಕಾರ್ಯಕ್ರಮ ನಿರೂಪಿಸಿದರು.