ಹಳೆಯಂಗಡಿ: ಮಹಾ ನಾಯಕ ಜೈ ಭೀಮ್ ಜಯಂತ್ಯೋತ್ಸವ-2024
Tuesday, July 23, 2024
ಹಳೆಯಂಗಡಿ: ಹಳೆಯಂಗಡಿ- ಮುಲ್ಕಿ ವಲಯದ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ ವತಿಯಿಂದ ಪ್ರಥಮ ಬಾರಿಗೆ ಹಳೆಯಂಗಡಿ- ಮುಲ್ಕಿ ತಾಲೂಕು ಮಟ್ಟದ ಮಹಾ ನಾಯಕ ಜೈ ಭೀಮ್ ಜಯಂತ್ಯೋತ್ಸವ-2024, ದಲಿತ ಸಮುದಾಯದ ಸ್ವಾಭಿಮಾನಿ ಬಾಂಧವರಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜಯಂತ್ಯೋತ್ಸವ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಗರಿಷ್ಠ ಅಂಕ ಪಡೆದ ಎಸ್ ಸಿ /ಎಸ್ ಟಿ ವಿದ್ಯಾರ್ಥಿಗಳಿಗೆ ಗೌರವಧನ ವಿತರಣೆ ಕಾರ್ಯಕ್ರಮ ಹಳೆಯಂಗಡಿಯ ಇಂದಿರಾ ನಗರ ಸಭಾಭವನದಲ್ಲಿ ಭಾನುವಾರ ನಡೆಯಿತು
ಮಂಗಳೂರು ಜಿಲ್ಲಾ ಎಸ್ ಸಿ /ಎಸ್ ಟಿ ಜಾಗೃತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಚಂದ್ರಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ವಿಚಾರಧಾರೆ ಬಗ್ಗೆ ಕಲ್ಬುರ್ಗಿಯ ಭಾಷಣಕಾರರಾದ ವಿಠಲ್ ವಗ್ಗನ್ ಮಾತನಾಡಿ ಭಾರತ ರತ್ನ ಡಾ. ಬಿಆರ್ ಅಂಬೇಡ್ಕರ್ ರವರು ಎಸ್ಸಿ /ಎಸ್ಟಿ ಹಾಗೂ ಓಬಿಸಿ ಜನಾಂಗಕ್ಕೆ ಅಕ್ಷರ ಅರಿವು ಅನ್ನ ಅಧಿಕಾರ ಆತ್ಮಭಿಮಾನ ನೀಡಿದವರು, ನಮಗೆ ಯಾವ ನಾಯಕರು ಇಲ್ಲ ಗುಲಾಮರಾಗಿ ಬದುಕಬೇಡಿ ಎಂದು ಹೇಳಿದವರು ಡಾ. ಬಿ ಆರ್ ಅಂಬೇಡ್ಕರ್ ರವರಾಗಿದ್ದು ಅವರ ಆದರ್ಶಗಳನ್ನು ಪಾಲಿಸಿ ಎಂದು ಕರೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮೈಸೂರು ವಿಭಾಗೀಯ ದ.ಸಂ.ಸ ಸಂಚಾಲಕ(ಭೀಮವಾದ) ವಿಶ್ವನಾಥ ಬೆಳ್ಳಂಪಳ್ಳಿ, ದ.ಕ .ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ, ಮುಲ್ಕಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ವಿದ್ಯಾಧರ ಡಿ, ತಾಲೂಕು ದ.ಸಂಸ ಸಂಚಾಲಕ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು ಗೀತಾ ನಿರೂಪಿಸಿದರು
ಬಳಿಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜಯಂತ್ಯೋತ್ಸವ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಗರಿಷ್ಠ ಅಂಕ ಪಡೆದ ಎಸ್ ಸಿ /ಎಸ್ ಟಿ ವಿದ್ಯಾರ್ಥಿಗಳಿಗೆ ಗೌರವಧನ ವಿತರಣೆ ಕಾರ್ಯಕ್ರಮ ನಡೆಯಿತು.