ಪರಸ್ಪರ ಪ್ರೀತಿ,ಹೊಂದಾಣಿಕೆ,ಕ್ಷಮೆ ಹಾಗೂ ಪ್ರಶಂಸಿಸುವ ಗುಣವಿರಲು ದಾಂಪತ್ಯ ಜೀವನ ಪರಿಪೂರ್ಣ. -ವಂ.ಪಾವ್ಲ್ ಸಿಕ್ವೇರಾ
Monday, July 29, 2024
ಕಿನ್ನಿಗೋಳಿ:ಸಂತ ಪೌಲರ ದೇವಾಲಯ ಬಳಕುಂಜೆಯಲ್ಲಿ ಜು.28 ರ ರವಿವಾರದಂದು ದಂಪತಿಗಳ ದಿನಾಚರಣೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾಂಪೈ ಪದವಿ ಪೂರ್ವ ಕಾಲೇಜು ಗಣಿತ ಪ್ರಾಚಾರ್ಯ ಲೋರನ್ಸ್ ಸಿಕ್ವೇರಾ ಅವರು ಕುಟುಂಬದಲ್ಲಿ ದಂಪತಿಗಳ ಪಾತ್ರದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಚರ್ಚ್ ಧರ್ಮಗುರು ವಂ.ಪಾವ್ಲ್ ಸಿಕ್ವೇರಾ ಮಾತನಾಡಿ, ದಂಪತಿಗಳು ಕುಟುಂಬದ ದೀಪ.ಈ ದೀಪದ ಬೆಳಕಿನಡಿ ಈಡೀ ಕುಟುಂಬ ಪ್ರಜ್ವಲಿಸುತ್ತದೆ.ಪರಸ್ಪರ ಪ್ರೀತಿ,ಹೊಂದಾಣಿಕೆ ಹಾಗೂ ಕ್ಷಮಿಸುವ ಗುಣವಿದ್ದರೆ ಕುಟುಂಬ ಪರಿಪೂರ್ಣವಾಗುತ್ತದೆ ಎಂದು ಹೇಳಿ ಎಲ್ಲಾ ದಂಪತಿಗಳಿಗೆ ಶುಭ ಹಾರೈಸಿದರು.ವೈವಾಹಿಕ ಜೀವನದ 50 ವರ್ಷ ಪೂರ್ಣ ಗೊಳಿಸದ 16 ದಂಪತಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚರ್ಚ್ ಧರ್ಮಗುರು ವಂದನೀಯ ಪಾವ್ಲ್ ಸಿಕ್ವೇರಾ,ಸಂಪನ್ಮೂಲ ವ್ಯಕ್ತಿ ಲಾರೆನ್ಸ್ ಸಿಕ್ವೇರಾ,ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಡಾ.ಫ್ರೀಡಾ ರೊಡ್ರಿಗಸ್ ,ಕಾರ್ಯದರ್ಶಿ ನ್ಯಾನ್ಸಿ ಕರ್ಡೋಜಾ,ಸರ್ವ ಆಯೋಗಗಳ ಸಂಯೋಜಕರಾದ ಲವೀನಾ ಸೆರಾವೊ,ಕಾನ್ವೆಂಟ್ ಸುಪೀರಿಯರ್ ಭಗಿನಿ ಪ್ರಮಿಳ,ಕಥೋಲಿಕ್ ಸಭಾ ಅಧ್ಯಕ್ಷರಾದ ಪ್ಯಾಟ್ರಿಕ್ ಪಿಂಟೊ,ಸ್ರೀ ಆಯೋಗದ ಸಂಚಾಲಕಿ ಹೆಲೆನ್ ಡಿಸೋಜಾ, ಸಮುದಾಯ ಆಯೋಗ ಸಂಚಾಲಕ ಫ್ರಾನ್ಸಿಸ್ ಮಿನೇಜಸ್ ಉಪಸ್ಥಿತರಿದ್ದರು. ವಿನ್ನಿ ಕ್ವಾಡ್ರಸ್ ಸರ್ವರನ್ನು ಸ್ವಾಗತಿಸಿ,ಪ್ಯಾಟ್ರಿಕ್ ಪಿಂಟೊ ವಂದನಾರ್ಪಣೆ ಮಾಡಿದರು.ಲಿಯೊ ಹಾಗೂ ರೇಷ್ಮಾ ಮಿನೇಜಸ್ ದಂಪತಿಗಳು ಕಾರ್ಯಕ್ರಮ ನಿರೂಪಿಸಿದರು. ದಂಪತಿಗಳಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ ಗಳನ್ನು ಏರ್ಪಡಿಸಿದ್ದರು.ಸುಮಾರು 40ಕ್ಕೂ ಅಧಿಕ ದಂಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.