-->


ಸಸಿಹಿತ್ಲು : ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಪುನರ್ ನಿರ್ಮಾಣದ ಮನವಿ ಪತ್ರ ಬಿಡುಗಡೆ

ಸಸಿಹಿತ್ಲು : ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಪುನರ್ ನಿರ್ಮಾಣದ ಮನವಿ ಪತ್ರ ಬಿಡುಗಡೆ

ಸಸಿಹಿತ್ಲು : ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು ಇದರ ಪುನರ್ ನಿರ್ಮಾಣದ ಮನವಿ ಪತ್ರ ಬಿಡುಗಡೆ ಸಮಾರಂಭ ಜು.28 ರ ಭಾನುವಾರ ದಂದು  ಕಾಂತು ಲಕಣ ಗಡಿ ಪ್ರದಾನರು ಯಾನೆ ಪಠೇಲ್ ಯಾದವ ಜಿ. ಬಂಗೇರ ಇವರ ಶುಭಾಶೀರ್ವಾದೊಂದಿಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
 ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಂಗನಾಥ ಭಟ್ ಮತ್ತು ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪ್ರಧಾನ ಅರ್ಚಕರು ತೋಚೋಡಿ ಶೇಖರ ಪೂಜಾರಿ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಮುಲ್ಕಿ ಸೀಮೆ ಅರಸರು ದುಗ್ಗಣ್ಣ ಸಾವಂತರು ಮನವಿ ಪತ್ರ ಬಿಡುಗಡೆ ಮಾಡಿದರು.
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷರು ವಾಮನ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ
ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಅಧ್ಯಕ್ಷರು ಸೂರ್ಯಕಾಂತ್ ಜಯ ಸುವರ್ಣ,  ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರು ಸತ್ಯಜಿತ್ ಸುರತ್ಕಲ್,
ಯುವ ನಾಯಕರು ಮಿಥುನ್ ರೈ, ಖಂಡಿಗೆ ಬೀಡು ಉಲ್ಲಾಯ ದೈವಸ್ಥಾನದ ವಾಸುದೇವ ಶೆಟ್ಟಿ, ಕೊಲ್ಲೂರು ಕಾಂತಾಬಾರೆ ಬುದಾಬಾರೆ ಕ್ಷೇತ್ರದ ಅಂತ ನಾಯ್ಗರು, ಮುಂಬೈ ಉಪ ಸಮಿತಿಯ ಅಧ್ಯಕ್ಷರು ಸತೀಶ್ ಎನ್ ಕೋಟ್ಯಾನ್,ಸಂಚಾಲಕರಾದ ಪದ್ಮನಾಭ ಸಸಿಹಿತ್ಲು,  ಅಶೋಕ್ ಸಸಿಹಿತ್ಲು, ಸಂಘಟನಾ ಕಾರ್ಯದರ್ಶಿ ರವೀಂದ್ರ ಶಾಂತಿ, ಹಳೆಯಂಗಡಿ ಪಂಚಾಯತ್ ಅಧ್ಯಕ್ಷರು ಪೂರ್ಣಿಮಾ,  
 ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷರು ವಸಂತ ಬೆರ್ನಾಡ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಅಧ್ಯಕ್ಷರು ಪ್ರಸಾದ್ ನಿಸರ್ಗ, 
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಮೋಹನ್ ಕೋಟ್ಯಾನ್,
 ಬಿಲ್ಲವ ಸಮಾಜ ಸೇವಾ ಸಂಘ  ಹಳೆಯಂಗಡಿ  ಅಧ್ಯಕ್ಷರು ಚಂದ್ರಶೇಖರ ನಾನಿಲ್, ಸಾರಂತಾಯ ಗರೊಡಿ ಆಡಳಿತ ಸಮಿತಿ ಅಧ್ಯಕ್ಷರು ಜಗನ್ನಾಥ ಆರ್. ಕೋಟ್ಯಾನ್,
ಪೂಜಾ ಅರೇಂಜರ್ಸ್ ಮಾಲೀಕರಾದ ಜಯಕೃಷ್ಣ ಕೋಟ್ಯಾನ್, ಉದ್ಯಮಿ ಪದ್ಮನಾಭ ಬಂಗೇರ, ನಡಿಕುದ್ರು ಶ್ರೀ ಜಾರಂದಾಯ ದೇವಸ್ಥಾನದ ಅರ್ಚಕರು ನಿರಂಜನ ಪೂಜಾರಿ, ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷರು ಸುರೇಶ್ ಕರ್ಕೇರ, ಕಡಪುರ ಮನೆ ಕದಿಕೆ ಹೇಮಚಂದ್ರ ಎಸ್. ಅಮೀನ್, ಉದ್ಯಮಿ  ಶಶೀಂದ್ರ ಎಮ್. ಸಾಲ್ಯಾನ್,  ಅರ್ಚಕರಾದ ಶ್ರೀಧರ ಪೂಜಾರಿ, ಸುರೇಶ್ ಪೂಜಾರಿ,  ಮಹಾಬಲ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷರು ಪುಷ್ಪಾ ದಯಾನಂದ್, ಗೌರವಾಧ್ಯಕ್ಷರು ಶಕುಂತಳ ಭೋಜ ಬಂಗೇರ, ಗೌರವ ಸಲಹೆಗಾರರು ಲೀಲಾ ವಸಂತ, ಹೊರನಾಡು ಸಮಿತಿ ಸದಸ್ಯೆ ಶ್ವೇತಾ ಸಂತೋಷ್ ಕೋಟ್ಯಾನ್
ಮತ್ತಿತರರು ಭಾಗವಹಿಸಿದ್ದರು.

ಸರ್ವ ಸಮಾಜದ  ವಿಶೇಷ ಪ್ರತಿನಿಧಿಗಳಾಗಿ ಚೈತ್ರಾ 
ಶ್ರೀಕಾಂತ್ ರಾವ್, ಪುರುಷೋತ್ತಮ ದೇವಾಡಿಗ, ಗಿರೀಶ್ ಕುಮಾರ್ ಶ್ರೀಯಾನ್, ಡೊಲ್ಫಿ ಡಿಸೋಜ, ಹರೀಶ್ ವಿ. ಸಾಲ್ಯಾನ್, ವ್ಯಾಸರಾಯ ಶೆಟ್ಟಿಗಾರ್, ಹನೀಫ್, ರಂಜಿತ್ ಭಂಡಾರಿ   ಆಗಮಿಸಿದ್ದರು.

 ಈ ಸಂದರ್ಭದಲ್ಲಿ ಮುಲ್ಕಿ ಸೀಮೆ ದುಗ್ಗಣ್ಣ ಸಾವಂತರು ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಇವರಿಗೆ  ಅಭಿನಂದನೆ ನಡೆಯಿತು. 

 ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಅಧ್ಯಕ್ಷರು ಮತ್ತು ಸದಸ್ಯರು, ಆಡಳಿತ ಸಮಿತಿ, ಮುಂಬೈ ಉಪಸಮಿತಿ, ಮಹಿಳಾ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ನಾಲ್ಕು ಕರೆ ಹತ್ತು ಸಮಸ್ತರು ಭಾಗವಹಿಸಿದ್ದರು..
ಶ್ರತಿ , ಹರ್ಷಾ, ವನಿತಾ ಪ್ರಾರ್ಥಿಸಿದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರು ಪರಮಾನಂದ ವಿ.ಸಾಲ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಆರ್. ಪ್ರಭಾತ್, ಪೂಜಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ನವೀನ್ ಕುಮಾರ್
ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article