ಪರ್ಲಬೈಲ್ ಗುತ್ತು ತುಕಾರಾಮ ಶೆಟ್ಟಿ ನಿಧನ
Thursday, July 25, 2024
ತುಕಾರಾಮ ಶೆಟ್ಟಿ ಮುಂಬೈಯಲ್ಲಿ ಹೊಟೇಲು ಉದ್ಯಮಿಯಾಗಿದ್ದರು. ಶಿಬರೂರು ದೈವಸ್ಥಾನಕ್ಕೆ ಸಂಬಂಧಿಸಿದಂತೆ ಗಡಿಕಾರರಾಗಿ ವರ್ಷದ ಹಿಂದೆ ಪಟ್ಟ ಪಡೆದಿದ್ದರು. ಶಿಬರೂರು ದೈವಸ್ಥಾನ ಬ್ರಹ್ಮಕಲಶೋತ್ಸವದ ಸಮಿತಿಯಲ್ಲಿದ್ದು, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದರು. ಶಿಬರೂರು ಬಂಟರ ಸಂಘದ ಅಧ್ಯಕ್ಷರಾಗಿ ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದರು ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಸ್ವಗೃಹ ಪರ್ಲಬೈಲಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.