ಕರಾವಳಿ ಮರಳು ಗಾರಿಕೆಗೆ ಹೊಸ ನೀತಿ ಅಳವಡಿಸಬೇಕೆಂದು ಕೆಪಿಸಿಸಿ ವತಿಯಿಂದ ಸಚಿವರಿಗೆ ಮನವಿ
Thursday, July 25, 2024
ಮೂಲ್ಕ:ಕರಾವಳಿ ಮರಳು ಗಾರಿಕೆಗೆ ಹೊಸ ನೀತಿ ಅಳವಡಿಸಬೇಕೆಂದು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ನಾಯಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಯವರ ನಾಯಕತ್ವದಲ್ಲಿ ಇಂದು ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಮಲ್ಲಿಕಾರ್ಜುನರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ನಿಯೋಗದಲ್ಲಿ ಕೆಪಿಸಿಸಿ ಸದಸ್ಯರಾದ ವಸಂತ ಬರ್ನಾಡ್ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ , ಮುಲ್ಕಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ, ಮೂಡಬಿದ್ರೆ ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್, ಕರೀಂ ಸಾಹಬ್, ಬಜ್ಪೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಸಾವುಲು ಹಮೀದ್ ಇದ್ದರು.