
ತೀರಾ ಹದಗೆಟ್ಟ ರಸ್ತೆಗೆ ಮುಕ್ತಿ ನೀಡಿದ ಫ್ರೆಂಡ್ಸ್ ಪಕ್ಷಿಕೆರೆ
Friday, July 26, 2024
ಪಕ್ಷಿಕೆರೆ:ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಮುಖ್ಯ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸವಾರರು ಸಂಚರಿಸದ ಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳಿಯ ಫ್ರೆಂಡ್ಸ್ ಪಕ್ಷಿಕೆರೆ ಇವರ ತಂಡ ರಸ್ತೆಯನ್ನು 30 ಮಂದಿ ಸದಸ್ಯರ ಜೊತೆ ಶ್ರಮದಾನ ಮಾಡುವ ಮೂಲಕ ರಸ್ತೆಯನ್ನು ಸರಿಪಡಿಸಿದರು.ಸಾರ್ವಜನಿಕ ವಲಯದಲ್ಲಿ ಇವರ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.