-->


ಜೈ ತುಳುನಾಡು  (ರಿ) ಸಂಘಟನೆಯ ಬೆನ್ನಿ ಬದ್ಕ್  ಕಾರ್ಯಕ್ರಮ

ಜೈ ತುಳುನಾಡು (ರಿ) ಸಂಘಟನೆಯ ಬೆನ್ನಿ ಬದ್ಕ್ ಕಾರ್ಯಕ್ರಮ

ಕಿನ್ನಿಗೋಳಿ  : ಕಿನ್ನಿಗೋಳಿಯ ತಾಳಿಪಾಡಿಗುತ್ತು ಲಲಿತಾ ಶೆಟ್ಟಿ ಇವರ ಮನೆಯ ಗದ್ದೆಯಲ್ಲಿ ಜೈ ತುಳುನಾಡು  (ರಿ) ಸಂಘಟನೆಯ ಬೆನ್ನಿ ಬದ್ಕ್ ಎಂಬ ಕಾರ್ಯಕ್ರಮವು ನಡೆಯಿತು ಹಿರಿಯರು ಕಿರಿಯರು ಎನ್ನದೆ  ಸಂತೋಷದಿಂದ ಎಲ್ಲರೂ  ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹೊಸ ತಲೆಮಾರಿನ ಜನತೆಗೆ ಕೃಷಿ ಬದುಕನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ನೇಜಿ ನೆಡುವ ಕ್ರಮದ  ಜೊತೆಗೆ ಕೃಷಿ ಬಗ್ಗೆ  ಮಾಹಿತಿಯನ್ನು ನೀಡಲಾಯಿತು. ಗದ್ದೆಯಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಳಿಪಾಡಿ ಗುತ್ತು ಲಲಿತ ಶೆಟ್ಟಿ, ಸಂಘದ ಅಧ್ಯಕ್ಷ ಉದಯ್ ಪೂಂಜಾ ತಾಳಿಪಾಡಿ ಗುತ್ತು, ಜೊತೆ ಕಾರ್ಯದರ್ಶಿ ಪೃಥ್ವಿ ತುಲುವೆ,  ಜೊತೆ ಕೋಶಾಧಿಕಾರಿ ನಿಶೀಲ್ ಶೆಟ್ಟಿ ಬೇಲಾಡಿ, ತುಳು ಲಿಪಿ ಸಮಿತಿಯ ಸಹ ಮೇಲ್ವಿಚಾರಕಿ  ಚಿರಶ್ರೀ, ಸ್ಥಾಪಕ ಸಮಿತಿಯ ಸದಸ್ಯ ಕಿರಣ್ ತುಲುವೆ, ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೀವಿತಾ ಕುತ್ತಾರ್, ಅಶ್ವಿತಾ, ಮಹೇಶ್ ಬೇಲಾಡಿ, ಕುಡ್ಲ ಘಟಕದ ಅಧ್ಯಕ್ಷ ನಿರಂಜನ್ ಕರ್ಕೇರ, ಉಪಾಧ್ಯಕ್ಷ ಮನೀಶ್ ಕುಮಾರ್, ಕಾರ್ಯದರ್ಶಿ ಚೇತನ್ ಅಂಚನ್, ಜೊತೆ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಕುಡ್ಲ ಘಟಕದ ಸಂಘಟನಾ ಕಾರ್ಯದರ್ಶಿ ದುರ್ಗಾಪ್ರಸಾದ್ ರೈ,ಸಹ ಸಂಘಟನಾ ಕಾರ್ಯದರ್ಶಿ ಲತಾ ಡಿಂಪಲ್,  ಸದಸ್ಯರುಗಳು , ತಾರಿಪಾಡಿ ಜವನೆರೆ ಕಲ ದ ಸದಸ್ಯರುಗಳು ಹಾಗೂ ಹಿರಿಯರು  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article