ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜುಲೈ 7 ರಂದು ಮೂಲ್ಕಿ ತಾಲೂಕಿನ ಎರಡನೆಯ ವರ್ಷದ ಮಾವು ಹಲಸು ಮೇಳ ನಡೆಯಲಿದೆ. ಮೂವತ್ತೈದಕ್ಕೂ ಹೆಚ್ಚು ಮಳಿಗೆಗಳು ಈ ಮೇಳದಲ್ಲಿ ಇದ್ದು ವೈವಿಧ್ಯದ ಹಲಸು ಮಾವು ಅಲ್ಲದೆ ನಾನಾ ಬಗೆಯ ಹಣ್ಣುಗಳ ಮಾರಾಟ ಇರಲಿದೆ. ಹಲಸು ಉಪುತ್ನ್ನಗಳಾದ ಹಪ್ಪಳ ಗೃಹಬಳಕೆಯ ವಸ್ತುಗಳು ತಿನಿಸುಗಳು ತರಕಾರಿ ಹಣ್ಣು ಹೂವುಗಳ ಗಿಡಗಳ ಮಾರಾಟ ಐಸ್ ಕ್ರೀಂ ಜ್ಯೂಸ್ ಸೇರಿದಂತೆ ಸ್ಥಲದಲ್ಲೇ ಹಲಸಿನ ಹೋಳಿಗೆ ತಿಂಡಿಗಳ ಮಾರಾಟ ನಡೆಯಲಿದೆ.