-->


ಹಂಗೇರಿಯಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾಗದರ್ಶನದ ಗೋಲ್ಡನ್ ಬಾಲಾಜಿ ದೇವಸ್ಥಾನ ನಿರ್ಮಾಣ

ಹಂಗೇರಿಯಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾಗದರ್ಶನದ ಗೋಲ್ಡನ್ ಬಾಲಾಜಿ ದೇವಸ್ಥಾನ ನಿರ್ಮಾಣ



ಬೆಂಗಳೂರು : ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವರ ಭಕ್ತಿಯ ಶಕ್ತಿಯು ಅನೇಕ ದೇಶಗಳಲ್ಲಿ ಈಗಾಗಲೇ ಪಸರಿಸಿದ್ದು, ಇದೀಗ ಯೂರೋಪಿಯನ್ ದೇಶದ ಹಂಗೇರಿಯಲ್ಲಿ ಭವ್ಯವಾದ ಬಾಲಾಜಿ ದೇವಸ್ಥಾನವನ್ನು ಅದರಲ್ಲೂ ಚಿನ್ನದ (ಗೋಲ್ಡನ್ ಟೆಂಪಲ್) ದೇವಳವಾಗಿ ನಿರ್ಮಾಣವಾಗಲಿದೆ.  ದೇವಳವನ್ನು ನಿರ್ಮಾಣ ಮಾಡಲು ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕ ಗುರುಗಳು, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರನ್ನು ಮಾರ್ಗದರ್ಶನಕರನ್ನಾಗಿ ಕೇಳಿಕೊಂಡಿರುವುದು ವಿಶೇಷತೆಯಾಗಿದ್ದು ಇದು ನಮ್ಮ ಕರ್ನಾಟಕ ರಾಜ್ಯದ ಜನತೆಗೆ ಹೆಮ್ಮೆ ತರುವಂತಹ ಕಾರ್ಯವಾಗಿದೆ. 
ಈ ಬಗ್ಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಸೇವಾಶ್ರಮದ ಮೂಲಕ ಮಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಮುಂಬೈಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ಸಭೆಯಲ್ಲಿಯೇ ಮಹತ್ವ ವಿಚಾರಗಳು ಚರ್ಚೆಯಾಗಿದೆಯಲ್ಲದೇ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಯೂರೋಪಿಯನ್ ಯೂನಿಯನ್ ಚೇಂಬರ್ಸ್ ಸಮಿತಿಯ ಉಪಾಧ್ಯಕ್ಷ ಹಂಗೇರಿಯ ಗೌರವಾನ್ವಿತ ಕೌನ್ಸುಲೇಟ್ (ದೂತಾವಾಸ) ಜನರಲ್ ಫರೆಂಕ್ ಜರಿ ಅವರು ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಮಂಡಿಸಿದ ದೇವಳದ ಚಿತ್ರಣದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಹಂಗೇರಿಯ ಪ್ರಮುಖ ಪ್ರದೇಶದಲ್ಲಿ 54 ಎಕ್ರೆ ಜಮೀನನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಮುಂದಿನ ಹಂತವಾಗಿ ಜಮೀನಿನ ವಾಸ್ತು ನಕ್ಷೆಯನ್ನು ರಚಿಸಲು ಸ್ವಾಮೀಜಿ ನೇತೃತ್ವದ ವಾಸ್ತು ತಜ್ಞರ ತಂಡವು ಹಂಗೇರಿಗೆ ಭೇಟಿ ನೀಡಲಿದೆ. ನಂತರ ಜಮೀನಿನ ದಾಖಲೆ ಪತ್ರಗಳು ಪರಿಶೀಲನೆಗೊಂಡು, ನಿರ್ಮಾಣದ ಪೂರ್ವ ತಯಾರಿಯನ್ನು ನಡೆಸಲು ಧಾರ್ಮಿಕ ವಿಧಿ ವಿಧಾನದ ತಂಡವನ್ನು ರಚಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. 
ಈ ಸಂದರ್ಭದಲ್ಲಿ  ಹಂಗೇರಿಯ ಗೌರವಾನ್ವಿತ ಕೌನ್ಸುಲೇಟ್  (ದೂತಾವಾಸ) ಜನರಲ್ ಫರೆಂಕ್ ಜರಿ ಅವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. 
ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್ ಮತ್ತು ರಾಹುಲ್ ಸಿ. ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.  
ಈ ಮಹತ್ವದ ಬೆಳವಣಿಗೆಯನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಸೇವಾಶ್ರಮದ ಭಕ್ತರು, ಸ್ವಾಮೀಜಿಯವರ ಆಪ್ತರಾದ ರಾಜಕೀಯ ಗಣ್ಯರು, ದೇಶ-ವಿದೇಶದ ಉದ್ಯಮಿಗಳು, ಅಪಾರ ಬಂಧು ಮಿತ್ರರು ಸ್ವಾಮೀಜಿಯವರಿಗೆ ಅಭಿನಂದಿಸಿದ್ದಾರೆ. ಈ ಬೆಳವಣಿಗೆಯಿಂದ ಎರಡೂ ದೇಶದ ಭಾವನಾತ್ಮ ನಂಬಿಕೆ ಪರಸ್ಪರ ವಿನಿಯಮವಾಗುತ್ತದೆ. ದೇಶದ ಪ್ರವಾಸೋದ್ಯಮ ಇಲಾಖೆ ಸಧೃಢಗೊಳ್ಳುತ್ತದೆ. ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಬಣ್ಣಿಸಿದ್ದಾರೆ. 



ವಿದೇಶಿಗರು ಭಾರತೀಯ ಪರಂಪರೆಯ ದಾಸರು

 
ಜಗತ್ತಿನಲ್ಲಿ ಭಾರತ ದೇಶದ ಪರಂಪರೆಗೆ ಬಹಳಷ್ಟು ಮಹತ್ವವಿದೆ. ಇಲ್ಲಿ ಯಾವುದೇ ಕೃತಕತೆಗೆ ಆಸ್ಪದ ಇಲ್ಲದಿರುವುದರಿಂದ ಕೃಷಿ, ಜನಪದ, ವೈದ್ಯಕೀಯ, ಶಿಕ್ಷಣ ಎಲ್ಲಕ್ಕೂ ಪುರಾತನದ ಇತಿಹಾಸ ಇರುವುದರಿಂದ ವಿದೇಶಿಗರು ಇಲ್ಲಿನ ಪರಂಪರೆಯ ದಾಸರಾಗಿದ್ದಾರೆ. ಇಂತಹ ಪರಂಪರೆಯನ್ನು ಶ್ರೀಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮೂಲಕ ಅನೇಕ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರವನ್ನು ವಿದೇಶಿ ನೆಲದಲ್ಲಿ ನಡೆಸಲಾಗುತ್ತಿದೆ. ಇದೀಗ ಹಂಗೇರಿಯ ಜನರು ನಮ್ಮ ಧಾರ್ಮಿಕತೆಯ ನಂಬಿಕೆಯನ್ನು ಹತ್ತಿರದಿಂದ ತಿಳಿದುಕೊಳ್ಳಲು ಬಾಲಾಜಿ ದೇವಸ್ಥಾನ ವನ್ನು ನಿರ್ಮಾಣ ಮಾಡಲು ಮುಂದೆ ಬಂದು ಮೊದಲ ಹಂತವಾಗಿ 54 ಎಕ್ರೆ ಜಮೀನನ್ನು ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ದೇವಳದ ನಿರ್ಮಾಣಕ್ಕೆ ಏನೆಲ್ಲಾ ಅವಶ್ಯಕತೆ ಇದೆ ಅದೆಲ್ಲವನ್ನು ಒದಗಿಸಿಕೊಟ್ಟು ಹಂಗೇರಿಯಲ್ಲಿರುವ ಭಾರತೀಯರಿಗೂ ಹಾಗೂ ಅಲ್ಲಿನ ಭಕ್ತ ಸಮೂಹಕ್ಕೂ ಧಾರ್ಮಿಕ ಚಿಂತನೆಯನ್ನು ಪಸರಿಸುವ ದೇವಲಯವನ್ನಾಗಿ ನಿರ್ಮಿಸಲಾಗುವುದು.

-  ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಬೆಂಗಳೂರು.
  ಅಧ್ಯಾತ್ಮಿಕ ವಿಶ್ವ ಗುರು ಅಂತಾರಾಷ್ಟ್ರೀಯ ವಾಸ್ತುತಜ್ಞರು,

Ads on article

Advertise in articles 1

advertising articles 2

Advertise under the article