-->


ಎಂ.ಆರ್.ಪಿ.ಎಲ್. ಸಂಸ್ಥೆಯ ವತಿಯಿಂದ  ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ- 2024

ಎಂ.ಆರ್.ಪಿ.ಎಲ್. ಸಂಸ್ಥೆಯ ವತಿಯಿಂದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ- 2024

ಬಜಪೆ:ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( ಎಂ.ಆರ್.ಪಿ.ಎಲ್.) ಸಂಸ್ಥೆಯ ವತಿಯಿಂದ  ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ- 2024  ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ನಡೆಯಿತು .ಕಾರ್ಯಕ್ರಮದಲ್ಲಿ
ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಸಂಯೋಜಕ  ರಂಜನ್ ಬೆಳ್ಳರ್ಪಾಡಿ ಅವರು 
  ತ್ಯಾಜ್ಯ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕತೆ ಮೂಲಕ ಹಸಿ ಕಸದಿಂದ ಉಪಯುಕ್ತ ಗೊಬ್ಬರವನ್ನು ಮನೆಯಲ್ಲಿ ತಯಾರಿಸುವ ವಿಧಾನದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು  ಕಾರ್ಯಕ್ರಮದಲ್ಲಿ ನೀಡಿದರು.
 ಪ್ರತಿ ದಿನ ಪ್ರತಿ ಮನೆಯಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣ ಸರಾಸರಿ ಒಂದು ಕೆ ಜಿ. ಈ ಕಸದಲ್ಲಿ  60% ಹಸಿ ಕಸವಾಗಿದ್ದು ಅದು ತರಕಾರಿಗಳ ಅನುಪಯುಕ್ತ ಭಾಗಗಳು, ಉಳಿದ ಆಹಾರ ಪದಾರ್ಥಗಳನ್ನು ಒಳಗೊಂಡಿರುತ್ತದೆ ಎಂದರು. ಈ ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರಿಗೆ ತಿಳುವಳಿಕೆ ಮೂಡಿಸಿದರು.  ಪ್ರತಿದಿನ ಮಂಗಳೂರು ನಗರದಲ್ಲಿ 300 ಟನ್,ಬೆಂಗಳೂರು ಮಹಾ ನಗರದಲ್ಲಿ 2,400 ಟನ್, ಇಡೀ ಭಾರತದಲ್ಲಿ 2 ಲಕ್ಷ ಟನ್ ಕಸ ಉತ್ಪತ್ತಿಯಾಗುತ್ತಿದೆ.ಆದರೆ ಇದರಲ್ಲಿ ಕೇವಲ 40% ಮಾತ್ರ ನಿರ್ವಹಣೆಯಾಗುತ್ತಿದೆ. ಉಳಿದ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ವಿವಿಧ ನೀರಿನ ಮೂಲಗಳಿಗೆ ಸೇರಿ ಸಮುದ್ರ ಸೇರುತ್ತದೆ. ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಅತಿಸೂಕ್ಷ್ಮ ಕಣಗಳಾಗಿ ವಿಭಜನೆ ಹೊಂದಿ ಮೈಕ್ರೋ ಪ್ಲಾಸ್ಟಿಕ್ ರೂಪದಲ್ಲಿ ಉಪ್ಪು ಹಾಗೂ ಮೀನುಗಳ ರೂಪದಲ್ಲಿ ನಮ್ಮ ತಟ್ಟೆಗೆ ಹಿಂತಿರುಗಿ ಬರುತ್ತದೆ ಎಂದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಸ್ವಚ್ಛತಾ ಸಂಕಲ್ಪವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ಅಧಿಕಾರಿ   ನಾಗರಾಜ ರಾವ್ ಸಂಸ್ಥೆಯ ಪ್ರತಿನಿಧಿಯಾಗಿ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಸುದೀಪ್ ಅಮೀನ್  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದರು. 


ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ಅಧಿಕಾರಿ   ನಾಗರಾಜ ರಾವ್,ಎಕ್ಕಾರು ಗ್ರಾ.ಪಂ ಉಪಾಧ್ಯಕ್ಷೆ 
ಶ್ರೀಮತಿ ಪದ್ಮಾಕ್ಷಿ,  ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾದ  ಸುರೇಶ್ ಕೆ, ಮೆಲ್ವಿನ್,  ಶ್ರೀಮತಿ ಬಬಿತಾ, ಶ್ರೀಮತಿ ವಿನೋದ, ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಎನ್.ರಾವ್, ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮ ಹೆಚ್. ಎಂ.,ಜ್ಯೋತಿ ಬಿ., ರಾಜಶ್ರೀ ಕೆ., ರಮ್ಯ ಕೆ.,ವಿದ್ಯಾಲತಾ, ವಿನ್ನಿ ನಿರ್ಮಲ ಡಿಸೋಜ,ಜಯಂತಿ ಎಂ. , ಶಿಕ್ಷಕ ಡಾ. ಅನಿತ್ ಕುಮಾರ್  ,ವಿದ್ಯಾರ್ಥಿಗಳು ಹಾಗೂ ಪೊಷಕರು ಉಪಸ್ಥಿತರಿದ್ದರು.

ಶಿಕ್ಷಕಿ ವಿದ್ಯಾಗೌರಿ ಎಂ.ಕೆ ಸ್ವಾಗತಿಸಿದರು, ಚಿತ್ರಾಶ್ರೀ ಕೆ.ಎಸ್.ದನ್ಯವಾದವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article