ಡೆಂಘಿ ನಿಯಂತ್ರಣ ಜಾಗೃತಿ ಅಭಿಯಾನ
Monday, July 22, 2024
ಹಳೆಯಂಗಡಿ:ಪಡುಪಣಂಬೂರು ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಇವರ ಸಹಯೋಗದೊಂದಿಗೆ “ಡೆಂಘಿ ನಿಯಂತ್ರಣ ಜಾಗೃತಿ ಅಭಿಯಾನಕ್ಕೆ” ಪಂಚಾಯತ್ ಅಧ್ಯಕ್ಷೆ ಕುಸುಮ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನಾಗರಿಕರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ಮಾರಕ ರೋಗ ನಿಯಂತ್ರಿಸಲು ಸಹಕಾರ ನೀಡಬೇಕಾಗಿದೆ ಎಂದರು
ಪಂಚಾಯತ್ ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯರಾದ ವಿನೋದ್ ಎಸ್ ಸಾಲ್ಯಾನ್,ಪ್ರಮೀಳಾ ಡಿ ಶೆಟ್ಟಿ, ಮೋಹನದಾಸ್, ದಿನೇಶ್ ಶೆಟ್ಟಿ, ಸಂತೋಷ್ ಕುಮಾರ್, ಅನಿಲ್ ಯಾನೆ ಸೀತಾರಾಮ, ಪವಿತ್ರ, ಜ್ಯೋತಿ ನಮಿತಾ, ವಿಜಯಲಕ್ಷ್ಮೀ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀರ್, ಕಾರ್ಯದರ್ಶಿ ಸುಜಾತ ಎಚ್. ಉಪಸ್ಥಿತರಿದ್ದರು
ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ವೈದ್ಯಾಧಿಕಾರಿ ಅನ್ಸಿಲಾ ಪತ್ರಾವೋ ರವರು ಡೆಂಘಿ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸುರಕ್ಷಾ ಅಧಿಕಾರಿ ಮಾರ್ಗರೇಟ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ ಗಣೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.