ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಗೆ ಬಡಗ ಎಕ್ಕಾರು ಸರಕಾರಿ ಪ್ರೌಡಶಾಲೆಯ ಬಾಲಕಿಯರ ತಂಡ ಆಯ್ಕೆ
Sunday, June 23, 2024
ಬಜಪೆ:ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಮಂಗಳೂರು ತಾಲೂಕು ಇಲ್ಲಿನ ಬಾಲಕಿಯರ ಖೋ ಖೋ ತಂಡವು ಹೆಚ್ ಸಿ ಎಲ್ ಫೌಂಡೇಶನ್ ರವರು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಘಟಿಸಿದ ರಾಜ್ಯಮಟ್ಟದ ಸ್ಪೋರ್ಟ್ಸ್ ಫೋರ್ ಚೇಂಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಜೂ. 20 ಮತ್ತು 21 ರಂದು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್ 2024 ರಲ್ಲಿ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಲೀಗ್ ಪಂದ್ಯಾವಳಿಯಲ್ಲಿ ಕೇರಳ ತಮಿಳುನಾಡು, ತೆಲಂಗಾಣ ತಂಡಗಳನ್ನು ಮಣಿಸಿ ಫೈನಲ್ ಹಂತವನ್ನು ಪ್ರವೇಶಿಸಿ ಆಂಧ್ರಪ್ರದೇಶ ತಂಡದೊಂದಿಗೆ 11 - 12 ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜು.21ರಂದು ಚೆನ್ನೈಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶವನ್ನು ಪಡೆಯಿತು. ಪ್ರಶಸ್ತಿ ಪತ್ರ ಮತ್ತು ಫಲಕ ದೊಂದಿಗೆ ತಂಡದ ತರಬೇತುದಾರರಾದ ಶ್ರೀಮತಿ ವಿದ್ಯಾಲತಾ ,ತಂಡದ ವ್ಯವಸ್ಥಾಪಕ ಡಾ. ಅನಿತ್ ಕುಮಾರ್ , ಜೊತೆಗೆ ತಂಡದ ಕ್ರೀಡಾಪಟುಗಳಾದ ದರ್ಶಿನಿ (ತಂಡದ ನಾಯಕಿ), ದೀಕ್ಷಾ, ಸ್ಮಿತಾ, ಹರ್ಷಿತ, ವಿ0ತಿ .ಬಿ . ಶೆಟ್ಟಿ, ಭೂಮಿಕ ಹೆಗಡೆ, ತನ್ವೀ ಪೂಜಾರಿ, ಸಮೀಕ್ಷಾ ಮತ್ತು ರಕ್ಷಿತಾ ಇದ್ದರು.