ಮೂಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಸಿಇಟಿ ನೀಟ್ ತರಗತಿ ಉದ್ಘಾಟನೆ
Sunday, June 23, 2024
ಮೂಲ್ಕಿ: ವಿಜ್ಞಾನ ಶಿಕ್ಷಣಕ್ಕಾಗಿ ಮಾತ್ರ ಸೀಮಿತವಾಗದೇ ವಿದ್ಯಾರ್ಥಿಯ ಬದುಕಿನದ್ದಕ್ಕೂ ಸಾಗುತ್ತದೆ. ತರಗತಿಯಲ್ಲಿ ಪಡೆಯುವ ಶಿಕ್ಷಣ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ದಾರಿ ದೀಪವಾಗಬೇಕೆಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸದಾಶಿವ ಶೆಟ್ಟಿಗಾರ್ ಹೇಳಿದರು. ಮೂಲ್ಕಿಯ ಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜಿನಲ್ಲಿ ಆರಂಭಗೊಂಡ 2024-25 ರ ಸಾಲಿನ ಸಿಇಟಿ ನೀಟ್ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದು ಆಡಳಿತ ಮಂಡಳಿಯ ಸದಸ್ಯರು, ಆಡಳಿತ ಅಧಿಕಾರಿ ಮಂಜುಳಾ, ಪ್ರಾಂಶುಪಾಲ ಯತೀಶ್ ಅಮೀನ್ ಉಪಸ್ಥಿತರಿದ್ದರು .ಉಪನ್ಯಾಸಕಿ ಶ್ವೇತ ನಿರೂಪಿಸಿದರು. ಉಪನ್ಯಾಸಕಿ ಅನುಷಾ ಸ್ವಾಗತಿಸಿದರು. ಉಪನ್ಯಾಸಕಿ ಸುನೀತ ವಂದಿಸಿದರು.