ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸೀಯಾಳಾಭಿಷೇಕ
Sunday, June 23, 2024
ಮುಲ್ಕಿ:ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಸೇವಾ ಯುವಕ ಮಂಡಲ ಮತ್ತು ಮಹಿಳಾ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಅನಾವೃಷ್ಟಿ , ಅಕಾಲವೃಷ್ಟಿ ಭಕ್ತಜನರ ಸಂಕಷ್ಟ ನಿವಾರಣಾ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ರವಿವಾರ ಬೆಳಿಗ್ಗೆ ಗಂಟೆ 7 ಗಂಟೆಗೆ ಶ್ರೀ ಆದಿಜನಾರ್ದನ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ದೇವರಿಗೆ ಸಾರ್ವಜನಿಕ ಸೀಯಾಳಾಭಿಷೇಕ , ಮಧ್ಯಾಹ್ನ ಸಾರ್ವಜನಿಕ ಹೂವಿನ ಪೂಜೆ ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್ ಹಾಗೂ ವಿಷ್ಣುಮೂರ್ತಿ ಭಟ್ ನೇತೃತ್ವದಲ್ಲಿ ನಡೆಯಿತು.