ಜೆ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಹಾಗೂ ಕೊಡುಗೈದಾನಿಗಳಿಂದ ಶಾಲಾ ಮಕ್ಕಳಿಗೆ , ಛತ್ರಿ ಹಾಗೂ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ
Monday, June 24, 2024
ಕಿನ್ನಿಗೋಳಿ,ಜೆ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಹಾಗೂ ಊರಿನ ಕೊಡುಗೈದಾನಿಗಳಿಂದ ಪದ್ಮನೂರು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಭಾರತ್ ಮಾತಾ ಶಾಲೆ ಪುನರೂರಿನ ಶಾಲಾ ಮಕ್ಕಳಿಗೆ , ಛತ್ರಿ ಹಾಗೂ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವು ಬಾಬಾ ಕೋಡಿ ಪುನರೂರಿನ ಆದಿಶಕ್ತಿ ಶ್ರೀ ನಾಗಕನ್ನಿಕ ಕ್ಷೇತ್ರದಲ್ಲಿ ಭಾನುವಾರದಂದು ನಡೆಯಿತು.ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಯುಗಪುರುಷದ
ಭುವನಾಭಿರಾಮ ಉಡುಪ ಮಾತನಾಡಿ ಜೆಬಿ ಪ್ರೆಂಡ್ಸ್ ಕಿನ್ನಿಗೋಳಿ ಹಾಗೂ ಊರಿನ ಕೊಡುಗೈದಾನಿಗಳ ಸಹಕಾರದೊಂದಿಗೆ ನಡೆದ ಅತ್ಯುತ್ತಮ ಕಾರ್ಯಕ್ರಮ. ಕ್ಷೇತ್ರದಲ್ಲಿ ನಡೆದಂತಹ ಕಾರ್ಯಕ್ಕೆ ಶ್ರೀ ಆದಿಶಕ್ತಿ ದೇವಿಯ ಅನುಗ್ರಹ ಸದಾ ಇರಲಿ ಎಂದರು.
ಕಿನ್ನಿಗೋಳಿಯ ಉದ್ಯಮಿ , ಪೃಥ್ವಿರಾಜ್ ಆಚಾರ್ಯ ಮಾತನಾಡಿ, ಜೆ ಬಿ ಫ್ರೆಂಡ್ಸ್ ಕ್ಲಬ್ಬಿನ ಇಂತಹ ಉತ್ತಮ ಕಾರ್ಯಕ್ಕೆ ಸದಾ ಪ್ರೋತ್ಸಾಹವಿದೆ ಎಂದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಹಿಲ್ಡಾ ಡಿಸೋಜ ಮಾತನಾಡಿ ಸಮಾಜ , ಸೇವೆಯನ್ನು ಮಾಡುತ್ತಾ ಬರುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಪದ್ಮನೂರು ಶಾಲೆಯ. ಮುಖ್ಯೋಪಾಧ್ಯಾಯನಿ ಶ್ರೀಮತಿ ಐರಿನ್ ಫೆರ್ನಾಂಡಿಸ್ , ಪುನರೂರು ಭಾರತಮಾತ ಶಾಲೆಯ , ಶಿಕ್ಷಕಿ ಕು. ರಾಜಲಕ್ಷ್ಮಿ, ಜೆಬಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು,