ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಯೋಗ ತರಬೇತಿ
Thursday, June 20, 2024
ಎಕ್ಕಾರು :ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಜೂ. 21ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹತ್ತನೇ ವರ್ಷದ ಸಂಭ್ರಮಾಚರಣೆಯ ಪೂರ್ವಭಾವಿ ತಯಾರಿಯಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಕೇಂದ್ರ ಸಮಿತಿ (ರಿ)ತುಮಕೂರು, ಬಜಪೆ ಶಾಖೆ ವತಿಯಿಂದ ಯೋಗ ತರಬೇತಿಯು ಬುಧವಾರದಂದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ನಡೆಯಿತು.
ಈ ಸಂದರ್ಭ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಬಜಪೆ ಇಲ್ಲಿನ ಯೋಗ ತರಬೇತುದಾರರಾದ ಆನಂದ ಅವರು ಮಾತನಾಡಿ
ಹತ್ತನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಲ್ಲರೂ ಪಾಲ್ಗೊಂಡು ಯೋಗಾಭ್ಯಾಸ ನಡೆಸಿ ಆರೋಗ್ಯವಂತರಾಗಿ ದೇಶದ ಮತ್ತು ವಿಶ್ವದ ಜನರ ಸಂಸ್ಕಾರ, ಸಂಘಟನೆ, ಸೇವೆ ಸದೃಢತೆ ಹೆಚ್ಚಾಗಬೇಕೆಂಬ
ಸದುದ್ದೇಶದಿಂದ ಹಮ್ಮಿಕೊಂಡಂತಹ ಕಾರ್ಯಕ್ರಮ ಇದಾಗಿದೆ ಎಂದರು.ಕೇಶವ ಅವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಪ್ರೌಢಶಾಲೆಯ 125 ವಿದ್ಯಾರ್ಥಿಗಳಿಗೆ ಧ್ಯಾನ, ಉಸಿರಾಟ ಕ್ರಿಯೆ ,ನಿಂತಲ್ಲೇ ಓಟ, ಮೆದುಳಿಗೆ ಅಭ್ಯಾಸ ಸಹಿತ ದೇಹದ ವಿವಿಧ ಅಂಗಗಳಿಗೆ ಚಾಲನೆ ಕೊಡುವ ಅಭ್ಯಾಸ, ವೃಕ್ಷಾಸನ, ತಾಡಾಸನ , ಪರ್ವತಾಸನ ಮೊದಲಾದ ಆಸನಗಳ ಪರಿಚಯವನ್ನು ಮಾಡಿಸುವುದರ ಜೊತೆಗೆ ಯೋಗದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅಭ್ಯಾಸವನ್ನು ಮಾಡಿಸುವುದರ ಮೂಲಕ ಮಾಹಿತಿಯನ್ನು ನೀಡಿದರು.