ಕೆಂಚನಕೆರೆ ಯೋಗೋಪಾಸನ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ಸಾಧಕರಿಗೆ ಗೌರವ ಕಾರ್ಯಕ್ರಮ
Friday, June 21, 2024
ಮುಲ್ಕಿ:ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮುಲ್ಕಿ ಸಮೀಪದ ಕೆಂಚನಕೆರೆ ಯೋಗೋಪಾಸನ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ಸಾಧಕರಿಗೆ ಗೌರವ ಕಾರ್ಯಕ್ರಮ ನಡೆಯಿತು
ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದ್ದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೆಂಚನಕೆರೆ ಯೋಗೋಪಾಸನ ಕೇಂದ್ರದ ಗುರುಗಳಾದ ಜಯ ಮುದ್ದು ಶೆಟ್ಟಿ ಮಾತನಾಡಿ ಯೋಗದಿಂದ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಸಾಧ್ಯವಾಗಿದ್ದು ಮಕ್ಕಳಿಂದ ಆದಷ್ಟು ಮೊಬೈಲ್ ದೂರವಿರಿಸಿ ಯೋಗದ ಮೂಲಕ ಆರೋಗ್ಯಕ್ಕೆ ಗಮನ ನೀಡಿ ಎಂದರು
ಮುಖ್ಯ ಅತಿಥಿಗಳಾಗಿ ತುಳು ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಯೋಗ ಗುರುಗಳಾದ ನಾರಾಯಣ ಕೋಟ್ಯಾನ್, ಯಾದವ ದೇವಾಡಿಗ, ಕುಮಾರ್, ಪೊಲೀಸ್ ಅಧಿಕಾರಿ ಕಾಂತಪ್ಪ, ಅವಿಭಾಜಿತ ದ.ಕ.ಹಾಗೂ ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.