-->


ಭಾರತೀಯ ಜನತಾ ಪಾರ್ಟಿ ಎಡಪದವು ಮಹಾ ಶಕ್ತಿ ಕೇಂದ್ರದ ವತಿಯಿಂದ 10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಭಾರತೀಯ ಜನತಾ ಪಾರ್ಟಿ ಎಡಪದವು ಮಹಾ ಶಕ್ತಿ ಕೇಂದ್ರದ ವತಿಯಿಂದ 10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಎಡಪದವು :ಭಾರತೀಯ ಜನತಾ ಪಾರ್ಟಿ ಎಡಪದವು ಮಹಾ ಶಕ್ತಿ ಕೇಂದ್ರದ ವತಿಯಿಂದ 10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ದಿನಾಚರಣೆಯನ್ನು ಶ್ರೀ ನಾರಾಯಣ ಗುರು ಸಭಾ ಭವನ ಕುಪ್ಪೆಪದವು ಇಲ್ಲಿ  ಹಮ್ಮಿಕೊಳ್ಳಲಾಯಿತು . ಈ ಸಂದರ್ಭ ಎಡಪದವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ  ಮಹಾಬಲ ಸಾಲ್ಯಾನ್  ಅವರು  ಮಾತನಾಡಿ ಯೋಗವು ನಮ್ಮ ಆರೋಗ್ಯವನ್ನು ಮಾತ್ರವಲ್ಲದೆ ನಮ್ಮ ಏಕಾಗ್ರತೆಗೆ ತುಂಬಾ ಅನುಕೂಲವಾದ ವಾತವರಣವನ್ನು ಕಲ್ಪಿಸುತ್ತದೆ . ಯೋಗವು ನಮ್ಮ ದೇಶದಲ್ಲಿ ಪ್ರಾರಂಭವಾಗಿ ಇದೀಗ ವಿಶ್ವದಾದ್ಯಂತ ಪಸರಿಸಿ ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಎಸ್ ಪಿ ವೈಎಸ್ ಎಸ್   ನ ಯೋಗ ಶಿಕ್ಷಕ ರಿತೇಶ್ ಅಟ್ಟೆಪದವು ಇವರು ಯೋಗ ಶಿಬಿರ ನಡೆಸಿಕೊಟ್ಟರು. ಈ ಸಂದರ್ಭ  ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ , ಉಪಾಧ್ಯಕ್ಷೆ ಸುಶ್ಮಾ , ಸದಸ್ಯ ಸತೀಶ್ ಪೂಜಾರಿ ಬಳ್ಳಾಜೆ , ಉತ್ತರ ಮಂಡಲದ ಯುವ  ಮೋರ್ಚಾದ ಉಪಾಧ್ಯಕ್ಷ ಸಂತೋಷ್  ಆಳ್ವ ಹಾಗೂ ಯೋಗ ಪಟುಗಳು ಉಪಸ್ಥಿತರಿದ್ದರು .
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article