ಬಜಪೆ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ
Friday, June 21, 2024
ಬಜಪೆ:ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಬಜ್ಪೆ ಇಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ 'ಎಂಬ ಘೋಷವಾಕ್ಯ ದೊಂದಿಗೆ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಪತಂಜಲಿ ಯೋಗ ಶಿಬಿರದ ವರಪ್ರಸಾದ್ ಶೆಟ್ಟಿ ಮಾತಾಡಿ ಸ್ವಾಸ್ಥ್ಯ ಸಮಾಜಕ್ಕೆ ಯೋಗ ತುಂಬಾ ಸಹಕಾರಿ, ಯೋಗ ನಿತ್ಯ ಜೀವನದಲ್ಲಿ ಅಳವಡಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಪತಂಜಲಿ ಯೋಗ ಶಿಬಿರದ ಯೋಗ ಶಿಕ್ಷಕರಾದ ಆನಂದ್ ಹಾಗೂ ಹರೀಶ್ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಅದರ ಮಹತ್ವವನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಆಲ್ವಿನ್ ನೋರೋನ್ಹಾ ,ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಮಸ್ಕರೇನಸ್, ಯೋಗ ಶಿಕ್ಷಕ ಮಾಧವ ಉಪಸ್ಥಿತರಿದ್ದರು.
ಅಶ್ವತ್ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು.