-->
ಬೆಥನಿ ಅಂಗ್ಲ ಮಾಧ್ಯಮ ಶಾಲೆ, ಸಂಸತ್ತು ಮತ್ತು  ಕ್ಲಬ್  ಗಳ ಉದ್ಘಾಟನೆ

ಬೆಥನಿ ಅಂಗ್ಲ ಮಾಧ್ಯಮ ಶಾಲೆ, ಸಂಸತ್ತು ಮತ್ತು ಕ್ಲಬ್ ಗಳ ಉದ್ಘಾಟನೆ

ಮೂಲ್ಕಿ:ಬೆಥನಿ ಆಂಗ್ಲ ಮಾಧ್ಯಮ ಶಾಲೆ ಕಿಲ್ಪಾಡಿ ಶಾಲೆಯ ವಿದ್ಯಾರ್ಥಿಗಳ ಸಂಸತ್ತು ಮತ್ತು ನಾನಾ ಕ್ಲಬ್  ಗಳ ಉದ್ಘಾಟನೆ ಸೋಮವಾರ ಶಾಲಾ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರದಲ್ಲಿ ನಡೆಯಿತು.

 ಎಸ್ .ವಿ .ಡಿ ಡಿವೈನ್   ಸೆಂಟರ್ ಮುಲ್ಕಿಯ ಫಾ.ಅಬ್ರಾಹಿಂ ಡಿ ಸೋಜಾ ಅವರು  ಶಾಲಾ ಸಂಸತ್ ಹಾಗೂ ನಾನಾ ಕ್ಲಬ್ ಗಳನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕಿ  ಸಿಸ್ಟರ್  ರೀಟ ಶರಲ್ ರವರು ವಿದ್ಯಾರ್ಥಿ ನಾಯಕರನ್ನು ಅಭಿನಂದಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಮಹಮ್ಮದ್ ಆಹಿಲ್ ಹಾಗೂ ರಘಾವಿ ಶಾಲಾ ವಿದ್ಯಾರ್ಥಿ ಹಾಗೂ ಉಪಾಯ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಸಹ  ಶಿಕ್ಷಕಿ ದಯಾವತಿ ಸ್ವಾಗತಿಸಿ ,ವಿದ್ಯಾರ್ಥಿ ವರ್ಷ ವಂದಿಸಿದರು. ಶ್ರೀಮತಿ ಸವಿತಾ ಪಿ ಹಾಗೂ ಸಿಸ್ಟರ್ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article