ಸಂಜೀವಿನಿ ಯೋಜನೆಯ 500 ಗಿಡಗಳ ಒಂದು ವನ ಉದ್ಘಾಟನೆ
Tuesday, June 25, 2024
ಬಜಪೆ:ಪ್ರಾಣ ಪ್ರತಿಷ್ಠಾನ ಆಯೋಜನೆಯಲ್ಲಿ ನಡೆಯುತ್ತಿರುವ ಬಜಪೆ ಪರಿಸರದಲ್ಲಿ 3000ಕ್ಕೂ ಅಧಿಕ ಸಸಿ ಹಾಗೂ 100ಕ್ಕೂ ಅಧಿಕ ಇಂಗು ಗುಂಡಿ ಮಾಡುವ ಸಂಜೀವಿನಿ ಯೋಜನೆಯ 500 ಗಿಡಗಳ ಒಂದು ವನವನ್ನು ಬಜಪೆ ಠಾಣಿಯ ಎಎಸ್ ಐ ರಾಮಣ್ಣಪೂಜಾರಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಆನಂದ್ , ಶ್ರೀ ಕೃಷ್ಣ ಸ್ನೇಹ ಬಳಗದ ಸ್ಥಾಪಕ ಅಧ್ಯಕ್ಷ ಗಿರೀಶ್, ಪ್ರಾಣ ಪ್ರತಿಷ್ಠಾನದ ಮಾರ್ಗದರ್ಶಕರುಗಳಾದ ಪ್ರಥ್ವಿನ್ ,ಯೋಗಾಚಾರ್ಯ ವಿನೋದ್ ,ಟ್ರಸ್ಟಿಗಳಾದ ರಂಜಿತ್ ,ಗಣೇಶ್ ,ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.