ಪ್ರಾಕೃತಿಕ ವಿಕೋಪ ದಿಂದ ಜೀವ ಹಾನಿ , ಜಾನುವಾರು ಹಾನಿ ಆಸ್ತಿಪಾಸ್ತಿ ರಕ್ಷಿಸಲು ಬೇಕಾದ ಗರಿಷ್ಠ ಮುಂಜಾಗ್ರತೆ ವಹಿಸುವ ಸಲುವಾಗಿ ಸಭೆ
Tuesday, June 25, 2024
ಮಂಗಳೂರು : ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಂಗಳವಾರ ಪ್ರಸಕ್ತ ಮುಂಗಾರು ಮಳೆ ಸಂದರ್ಭ ಪ್ರಾಕೃತಿಕ ವಿಕೋಪ ದಿಂದ ಜೀವ ಹಾನಿ , ಜಾನುವಾರು ಹಾನಿ ಆಸ್ತಿಪಾಸ್ತಿ ರಕ್ಷಿಸಲು ಬೇಕಾದ ಗರಿಷ್ಠ ಮುಂಜಾಗ್ರತೆ ವಹಿಸುವ ಸಲುವಾಗಿ
ಸಭೆ ನಡೆಯಿತು.
ಶಾಸಕರುಗಳಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಯನ್ನು ನೀಡಿದರು.
ಮಳೆಗಾಲದ ಸಂದರ್ಭ ನೆರವಿಗಾಗಿ ತುರ್ತು ನಿರ್ವಹಣಾ ತಂಡದ ರಚನೆ, ಕೃತಕ ನೆರೆ ಉಂಟಾದ ಸಂದರ್ಭ ಪರ್ಯಾಯ ವ್ಯವಸ್ಥೆ, ಪ್ರಾಕೃತಿಕ ವಿಕೋಪದಿಂದ ಆಗುವ ನಷ್ಟ ಪರಿಹಾರ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.ಶಾಲಾ ಮಕ್ಕಳು ಸುರಕ್ಷತೆಯಿಂದ ಶಾಲೆಗೆ ಹೋಗಿ ಬರುವ ಎಲ್ಲಾ ವ್ಯವಸ್ಥೆಗಳು ಇದೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಗಮನ ನೀಡಬೇಕು ಎಂದು ಶಾಸಕರು ಸೂಚಿಸಿದರು.