ಸಂಘಗಳ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ
Tuesday, June 25, 2024
ಬಜಪೆ:ವಿದ್ಯಾರ್ಥಿಗಳು ಎಳವೇ ಯಲ್ಲೇ ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಜ್ಪೆ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ.ಫಾ.ರೋನಾಲ್ಡ್ ಕುಟಿನ್ಹ ಹೇಳಿದರು.ಅವರು ಬಜ್ಪೆ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 2024 - 25ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಹಾಗೂ ಪದಗ್ರಹಣ ಸಮಾರಂಭ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಆಲ್ವಿನ್ ನೋರೋನ್ಹ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಾಲಾ ನಾಯಕಿಯಾಗಿ ರೀಝಾ ಎಲಿಶಾ ಪಿಂಟೋ, ಉಪನಾಯಕನಾಗಿ ಇಯಾನ್ ರೆನ್ವಿಲ್ ಮಾಥಯಸ್ ಹಾಗೂ ಸದಸ್ಯರುಗಳು ಪ್ರಮಾಣವಚನ ಸ್ವೀಕರಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಶಿಲ್ಪಾ ಡಿ'ಸೋಜಾ,ಶಿಕ್ಷಕ ವೃಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಯುಕ್ತಿ ಸ್ವಾಗತಿಸಿ, ಅಡ್ರಿಲ್ ಸಿಕ್ವೇರಾ ಧನ್ಯವಾದಗೈದರು. ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಅಶ್ವಥ್ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು.