-->

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂಲ್ಕಿ ಹಳೆಯಂಗಡಿ ವಲಯ ಸಮಿತಿಯಿಂದ ಪುಸ್ತಕ ವಿತರಣೆ

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂಲ್ಕಿ ಹಳೆಯಂಗಡಿ ವಲಯ ಸಮಿತಿಯಿಂದ ಪುಸ್ತಕ ವಿತರಣೆ

ಮೂಲ್ಕಿ:ಶಿಕ್ಷಣದಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದ್ದು ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕಾರ್ಯ  ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್  ಮೂಲಕ ನಡೆಯುತ್ತಿದೆಯೆಂದು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ ಪ್ರಕಾಶ್‌ ಸುವರ್ಣ ಹೇಳಿದರು.ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ನ  ಮೂಲ್ಕಿ ಹಳೆಯಂಗಡಿ ವಲಯ ಸಮಿತಿ ಯ ವತಿಯಿಂದ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ಜರಗಿದ ಅಸೋಸಿಯೇಶನ್‌ ನ ಮೂಲ್ಕಿ -ಹಳೆಯಂಗಡಿ ವಲಯ ಸಮಿತಿಯ  ಟೈಲರ್ಸ್ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಟ್ಯೆಲರ್ಸ್‌ ಅಸೋಸಿಯೇಶನ್‌ ನ ಹಳೆಯಂಗಡಿ ವಲಯ ದ  ಅಧ್ಯಕ್ಷ ರವಿ ಜಿ ಅಮೀನ್  ಅಧ್ಯಕ್ಷ ತೆ  ವಹಿಸಿದ್ದು ಮೂಲ್ಕಿ ವಲಯದ ಅಧ್ಯಕ್ಷ  ಲಾನ್ಸಿ ಡಿ ಅಲ್ಮೆಡ,  ಕ್ಷೇತ್ರ ಸಮಿತಿಯ ಅಧ್ಯಕ್ಷ  ಅಣ್ಣಪ್ಪ ಕೆ. ಎಸ್. ,ಕಾರ್ಯದರ್ಶಿ ದಾಮೋದರ ಶೆಟ್ಟಿಗಾರ್,ಕೋಶಾಧಿಕಾರಿ  ಸುಮಿತ್ರ , ಜಿಲ್ಲಾ ಸಮಿತಿ ಯ ಸದಸ್ಯರಾದಉದಯ ಅಮೀನ್,ಕೇಶವ ಕಾಮತ್, ವಲಯ ಪದಾಧಿಕಾರಿಗಳು ಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ  2023-2024ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ ಎಸ್‌ ಎಲ್ ಸಿ ಮತ್ತು ಪಿಯುಸಿ  ಯಲ್ಲಿ  90%ಅಧಿಕ ಅಂಕ ಪಡೆದ ಸಂಸ್ಥೆಯ ಸದಸ್ಯರಾದ  ದಯಾವತಿ ಮತ್ತು ಸೀತರಾಮರ ಮಕ್ಕಳಾದ ಶಿರೀಶ್ ಮತ್ತು ಲಿಖಿತಾ ಪೂಜಾರಿಯವರನ್ನು ವಲಯದ ಪರವಾಗಿ ಗೌರವಿಸಲಾಯಿತು.  120 ಮಂದಿಗೆ ಪುಸ್ತಕ ವಿತರಿಸಲಾಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807