-->


ಕಿಲೆಂಜಾರು ಅರಮನೆ ಸರಕಾರಿ ಪ್ರೌಢ ಶಾಲೆ ಕುಪ್ಪೆಪದವು -  ಶಾಲಾ ಪ್ರಾರಂಭೋತ್ಸವ

ಕಿಲೆಂಜಾರು ಅರಮನೆ ಸರಕಾರಿ ಪ್ರೌಢ ಶಾಲೆ ಕುಪ್ಪೆಪದವು - ಶಾಲಾ ಪ್ರಾರಂಭೋತ್ಸವ

ಕೈಕಂಬ : ಕಿಲೆಂಜಾರು ಅರಮನೆ ಸರಕಾರಿ ಪ್ರೌಢ ಶಾಲೆ ಕುಪ್ಪೆಪದವು ಇದರ ಶಾಲಾ ಪ್ರಾರಂಭೋತ್ಸವ ಶುಕ್ರವಾರ ಸಂಭ್ರಮ, ಸಡಗರದಿಂದ ನಡೆಯಿತು ಹಾಗೂ ಲಯನ್ಸ್ ಕ್ಲಬ್ ಮೂಡಬಿದ್ರಿ ಇದರ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನ ಮತ್ತು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು  ಶಾಲಾ ಆವರಣದಿಂದ ಕುಪ್ಪೆಪದವು ಪೇಟೆಯಲ್ಲಿ  ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯಗಳ ಸಹಿತ  ಆಕರ್ಷಕ ಮೆರವಣಿಗೆ ನಡೆಸಿದರು.
ಬಳಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುಧೀರ್ ಜೈನ್ ಅಧ್ಯಕ್ಷತೆಯಲ್ಲಿ  ನಡೆದ ಸಮಾರಂಭದಲ್ಲಿ ಕಳೆದ ವರ್ಷದ 10ನೇ ತರಗತಿಯ ಪರೀಕ್ಷೆಯಲ್ಲಿ ನೂರು ಶೇಖಡಾ ಸಾಧನಗೈದ ಧೀರಜ್, ಸಿಂಚನ ಮತ್ತು ಶ್ರಾವ್ಯ ಅವರನ್ನು ಶಾಲು ಹೊದೆಸಿ ಸ್ಮರಣಿಕೆ  ಮತ್ತು ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಶಾಲಾಭಿವೃದ್ದಿ ಸಮಿತಿಯ ಸದಸ್ಯ ಶೇಖ್ ಅಬ್ದುಲ್ಲ ಅಭಿನಂದನಾ ನುಡಿಗಳನ್ನಾಡಿ ವಿದ್ಯಾರ್ಥಿ ಗಳ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು. ಲಯನ್ಸ್ ಕ್ಲಬ್ ಜೋನ್ 2 ರೀಜನ್ 12 ವಲಯಾಧ್ಯಕ್ಷ ದಿನೇಶ್ ಎಂ. ಕೆ ಮಾತನಾಡಿ ವಿಶ್ವ ಪರಿಸರ ದಿನ ಮತ್ತು ತಂಬಾಕು ರಹಿತ ದಿನದ ಮಹತ್ವ ವನ್ನು ವಿವರಿಸಿ ವಿದ್ಯಾರ್ಥಿ ಗಳಿಗೆ ಶುಭ ಹಾರೈಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್ ಪುಸ್ತಕಗಳನ್ನು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುಧೀರ್ ಜೈನ್ ವಿತರಿಸಿದರು. ಶಾಲಾಭಿವೃದ್ದಿ ಸಮಿತಿಯ 
ದಯಾನಂದ ಶೆಟ್ಟಿ ಕುಲವೂರು  ಮಾತನಾಡಿದರು. ಕುಪ್ಪೆಪದವು ಪಂಚಾಯತ್ ಅಧ್ಯಕ್ಷೆ ವಿಮಲಾ ಗಿರಿಧರ್, ಮೂಡಬಿದ್ರಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಒಸ್ವಾಲ್ಡ್ ಡಿ'ಕೊಸ್ತ, ಲಯನ್ಸ್ ಕ್ಲಬ್ ನ 24-25ನೇ ಸಾಲಿನ ನಿಯೋಜಿತ ಅಧ್ಯಕ್ಷ ಬೋನವೆಂಚರ್ ಮಿನೆಜಸ್, ಶಾಲಾಭಿವೃದ್ದಿ ಸಮಿತಿಯ ಸದಸ್ಯ ಶಶಿಧರ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಫಿಲಿಫ್ ಅರ್ಥರ್ ಡಿ'ಸೋಜಾ, ಶಿಕ್ಷಕರಾದ ದೇವದಾಸ್, ಶ್ರೀಮತಿ ತುಳಸಿ ಉಪಸ್ಥಿತರಿದ್ದರು. ಶಾಲಾ ಹಳೇ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಮಾರ್ಕ್ ಮೆಂಡೋನ್ಸ ಸ್ವಾಗತಿಸಿ, ವಿಶ್ವ ಪರಿಸರ ದಿನ ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.
ಗಣಿತ ಶಿಕ್ಷಕಿ ವನಿತಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ನೇತ್ರಾ ವಂದಿಸಿದರು.

Ads on article

Advertise in articles 1

advertising articles 2

Advertise under the article