Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲ ಅಧ್ಯಕ್ಷರಾಗಿ ಪ್ರೇಮಲತಾ ಯೋಗೀಶ್ ಅವಿರೋಧ ಆಯ್ಕೆ

ಹಳೆಯಂಗಡಿ:ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲ 10 ನೇ ತೋಕೂರು ಇದರ  ವಾರ್ಷಿಕ ಮಹಾಸಭೆಯು  ಭಾನುವಾರದಂದು  ಸಂಸ್ಥೆಯ  ಕಾರ್ಯಾಲಯದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ  ಸತತ ಮೂರನೇ ವರ್ಷಕ್ಕೆ ಶ್ರೀಮತಿ ಪ್ರೇಮಲತಾ ಯೋಗೀಶ್  ಅವರು  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿಯಾಗಿ ಶ್ರೀಮತಿ ಕುಸುಮಾ ಎಚ್ ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ  ರೇಷ್ಮಾ ಮೋಹನ್, ಕೋಶಾಧಿಕಾರಿಯಾಗಿ ಶ್ರೀಮತಿ ಇಂದಿರಾ ಸಂಜೀವ ಕರ್ಕೇರ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಮಿತ್ರ , ಶ್ರೀಮತಿ ನಮಿತಾ ನವೀನ್ ಚಂದ್ರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರ್ಚನಾ ಸಾಲ್ಯಾನ್ , ಸಮಿತಿ ಸದಸ್ಯರಾಗಿ ಪುಷ್ಪ, ವಾರಿಜಾ, ನಿಶ್ಮಿತಾ, ಶಶಿಕಲಾ, ಯಶೋಧ ಲಕ್ಷ್ಮಣ, ಸುಮಾ ಜೋಸೆಫ್, ಇಂದಿರಾ ದೇಜಪ್ಪ, ಸುಮಾ ಸುಂದರ  ಆಯ್ಕೆಯಾದರು.

 ಶ್ರೀಮತಿ ಕುಸುಮಾ ಅವರು ಕಾರ್ಯಕ್ರಮ  ನಿರೂಪಿಸಿದರು