ಪಕ್ಷಿಕೆರೆ ನಾಗಬ್ರಹ್ಮ ಪ್ರೀಮಿಯರ್ ಲೀಗ್ -2024: ತಾಳಿಪಡಿ ಫ್ರೆಂಡ್ಸ್ ವಿನ್ನರ್, ಅರಿಂಜೇಗುಡ್ಡೆ ರನ್ನರ್
Thursday, June 27, 2024
ಕಿನ್ನಿಗೋಳಿ : ನಾಗಬ್ರಹ್ಮ ಫ್ರೆಂಡ್ಸ್ ಹೊಸಕಾಡು ಇದರ ಆಶ್ರಯದಲ್ಲಿ ನಾಗಬ್ರಹ್ಮ ಪ್ರೀಮಿಯರ್ ಲೀಗ್ -2024 ವಾಲಿಬಾಲ್ ಪಂದ್ಯಾಕೂಟವು ಜೂ.16 ರಂದು ಪಕ್ಷಿಕೆರೆಯ ಹೊಸಕಾಡಿನಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ 20224ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಗಬ್ರಹ್ಮ ಪ್ರಿಮಿಯಾರ್ ಲೀಗ್ -2024 ವಾಲಿಬಾಲ್ ಪಂದ್ಯಾಕೂಟದಲ್ಲಿ ತಾಳಿಪಡಿ ಫ್ರೆಂಡ್ಸ್ ತಾಳಿಪಡಿ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಅರಿಂಜೇಗುಡ್ಡೆ ಫ್ರೆಂಡ್ಸ್ ತಂಡ ಪಡೆದುಕೊಂಡಿತು.
ತೃತೀಯ ಮತ್ತು ಚತುರ್ಥ ಬಹುಮಾನಗಳನ್ನು ಸ್ಕೂಲ್ ಫ್ರೆಂಡ್ಸ್ ತೋಕೂರು ಮತ್ತು ಪಕ್ಷಿಕೆರೆ ಫ್ರೆಂಡ್ಸ್ ಪಕ್ಷಿಕೆರೆ ತಂಡ ಪಡೆಯಿತು.
ಸಮಾರಂಭದ ವೇದಿಕೆಯಲ್ಲಿ ಧನಂಜಯ್ ಶೆಟ್ಟಿಗಾರ್ ಸಾಗರಿಕ, ಶ್ರೀ ನಾಗಬ್ರಹ್ಮ ಭಜನಾ ಮಂಡಳಿ (ರಿ ) ಹೊಸಕಾಡು ಇದರ ಪ್ರಧಾನ ಕಾರ್ಯದರ್ಶಿ ಹರೀಶ್ ಜೆ. ಸಾಲ್ಯಾನ್, ಕೆಮ್ರಾಲ್ ಗ್ರಾಮಪಂಚಾಯತ್ ಅಧ್ಯಕ್ಷ ಮೈಯದ್ದಿ, ಸದಸ್ಯರಾದ ಶೇವತಿ ಶೆಟ್ಟಿಗಾರ್, ಶಶಿ ಸುರೇಶ್ ಹೊಸಕಾಡು, ವಿಶ್ವ ಹಿಂದೂ ಪರಿಷತ್ ಬಜರಂಗದಳ ನಾಗಬ್ರಹ್ಮ ಶಾಖೆಯ ಅಧ್ಯಕ್ಷ ಕಿಶೋರ್ ಕುಮಾರ್, ಹೇಮಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.