ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಬಾಲಕಿಯರ ಖೋ ಖೋ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ,ಸನ್ಮಾನ ಕಾರ್ಯಕ್ರಮ
Wednesday, June 26, 2024
ಬಜಪೆ: ಎಚ್ ಸಿ ಎಲ್ ಫೌಂಡೇಷನ್ ವತಿಯಿಂದ ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್ 2024 ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರಿನ ಬಾಲಕಿಯರ ಖೊ ಖೋ ತಂಡ,ತರಬೇತುದಾರರಿಗೆ ಸನ್ಮಾನ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ನಡೆಯಿತು. ಬಾಲಕಿಯರ ಖೋ ಖೋ ತಂಡ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ಮತ್ತು ತಂಡದ ವ್ಯವಸ್ಥಾಪಕರದ ಡಾ. ಅನಿತ್ ಕುಮಾರ್ ರವರನ್ನು ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಹಾಗೂ
ಕ್ರೀಡಾಪಟುಗಳ ಪೋಷಕರಾದ ಶ್ರೀಮತಿ ಭವಾನಿ, ಶ್ರೀಮತಿ ಲಾವಣ್ಯ ಟಿ ಹೆಗಡೆ ,ಶ್ರೀಮತಿ ಬೇಬಿ, ಶ್ರೀಮತಿ ಶೋಭಾ, ಮನೋಜ್ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಎಕ್ಕಾರು ಗ್ರಾ.ಪಂ ನ ಮಾಜಿ ಅಧ್ಯಕ್ಷ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯ ಸುರೇಶ್ ಶೆಟ್ಟಿ ಎಕ್ಕಾರು,ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸುದೀಪ್ ಅಮೀನ್, ಸದಸ್ಯರಾದ ಸುರೇಶ್ ಶೆಟ್ಟಿ, ಮೇಲ್ವಿನ್, ಸುರೇಶ್ ಕೆ , ಶ್ರೀಮತಿ ಶ್ಯಾಮಲಾ, ಶ್ರೀಮತಿ ಬಬಿತಾ ಶ್ರೀಮತಿ ವಿನೋದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಎಚ್.ಎಂ. ಶಿಕ್ಷಕರಾದ ಶ್ರೀಮತಿ ರಮ್ಯಾ, ಶ್ರೀಮತಿ ರಾಜಶ್ರೀ ಕೆ. ಶ್ರೀಮತಿ ವಿನ್ನಿ ನಿರ್ಮಲ ಡಿ ಸೋಜಾ, ಕುಮಾರಿ ಜಯಂತಿ ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ವಿದ್ಯಾ ಗೌರಿ ಸ್ವಾಗತಿಸಿದರು ಕುಮಾರಿ ರಕ್ಷಿತಾ ವಂದಿಸಿದರು.