ಹಳೆಯಂಗಡಿ: ಸಂತೆಕಟ್ಟೆ ಜುಮಾ ಮಸೀದಿಯಲ್ಲಿ ಸಮಸ್ತ 90 ವರ್ಷಾಚರಣೆ
Thursday, June 27, 2024
ಹಳೆಯಂಗಡಿ : ಸಮಸ್ತ 90ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಳೆಯಂಗಡಿಯ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಮ್ ಮಸೀದಿಯಲ್ಲಿ ಸಮಸ್ತದ ಧ್ವಜಾರೋಹಣ ಕಾರ್ಯಕ್ರಮ ಬುಧವಾರ ನಡೆಯಿತು.
ಹಿಮಾಯತುಲ್ ಇಸ್ಲಾಮ್ ಮಸೀದಿಯ ಅಧ್ಯಕ್ಷರಾದ ಅಶ್ರಫ್ ಪಡುತೋಟ ಧ್ವಜಾರೋಹಣ ಗೈದು ಸಮಸ್ತಕ್ಕೆ ಶುಭಹಾರೈಸಿದರು.
ದುಆ ನೆರವೇರಿಸಿ ಪ್ರಾಸ್ತಾವಿಕ ಮಾತನಾಡಿದ ಹಿಮಾಯತುಲ್ ಇಸ್ಲಾಮ್ ಮಸೀದಿಯ ಖತೀಬ್ ಅಬೂಬಕ್ಕರ್ ಮದನಿ, ಸಮಸ್ತ ಉಲಮಾ ಶಿರೋಮಣಿಗಳ ನಾಯಕತ್ವದಲ್ಲಿ ಬೆಳೆದು ಬಂದಿರುವ ಸಮಾಜದ ಬೆಳಕು. ಸಮಸ್ತ ಸ್ವಾತಂತ್ರ್ಯ ಹೋರಾಟದಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡಿದ ಸಂಘಟನೆಯಾಗಿದ್ದು, ನಾವೆಲ್ಲರೂ ಅಂತಹಾ ಸಂಘಟನೆಯ ಭಾಗವಾಗಿರುವುದು ನಮ್ಮ ಭಾಗ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮೌಲಾನ ಮುಹಮ್ಮದ್ ಹನೀಫ್ ಝಿಯಾಹಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕಜಕತೋಟ, ಅಬ್ದುಲ್ ಖಾದರ್ ಕಜಕತೋಟ, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಎಸ್ಕೆಎಸ್ಬಿವಿ ಅಧ್ಯಕ್ಷ ಹಾಸನ್ ರಾಹಿಶ್ ಕಜಕತೋಟ. ಹಿಮಾಯತುಲ್ ಇಸ್ಲಾಮ್ ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಬ್ದುಲ್ ರಶೀದ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.