ಭಾರೀ ಮಳೆಗೆ ಕೃಷಿ ಭೂಮಿಗಳು ಜಲಾವೃತ್ತ ,ಗ್ರಾ.ಪಂ ತಂಡ ಭೇಟಿ
Thursday, June 27, 2024
ಪಕ್ಷಿಕೆರೆ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಜ, ಕೊಯಿಕುಡೆ,ಉಳ್ಯ, ಬೈಲಗುತ್ತು ,ಮೊಗಪಾಡಿ ಪ್ರದೇಶಗಳ ಕೃಷಿ ಭೂಮಿ,ತೋಟಗಳು ಜಲಾವೃತ್ತಗೊಂಡಿದೆ.ಜಲಾವೃತ್ತ ಗೊಂಡ ಪ್ರದೇಶಗಳಿಗೆ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದಿ ಪಕ್ಷಿಕೆರೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ, ಪಂಚಾಯತ್ ಸದಸ್ಯರುಗಳಾದ ಸುರೇಶ್ ಪಂಜ, ಕೇಶವ ಪೂಜಾರಿ, ಪಂಚಾಯತ್ ಸಿಬ್ಬಂದಿಗಳಾದ ಕೇಶವ ದೇವಾಡಿಗ, ಪ್ರಜ್ವಲ್ ಗ್ರಾಮಸ್ಥರಾದ ಸಂತೋಷ್ ಶೆಟ್ಟಿ ಪಂಜದ ಗುತ್ತು, ಗಣೇಶ್ ಶೆಟ್ಟಿ ಪಂಜ ಹಾಗೂ ಮೊದಲಾದವರು ಭೇಟಿ ನೀಡಿದರು.